ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿಯಿತ್ತು ಪೂಜ್ಯ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನಾಪತ್ರವನ್ನು ನೀಡಲಾಯಿತು. ಮುಂದೆ ನಡೆಯಲಿರುವ ಜೀರ್ಣೋದ್ಧಾರ ಕಾರ್ಯಗಳ ಕುರಿತು ವಿವರಿಸಲಾಯಿತು. ಹಿರಿಯರಾದ ಪುರುಷೋತ್ತಮ ಪುಣಿಚಿತ್ತಾಯ ನೀರ್ಮಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ರಾವ್ ಪಿಲಿಕೂಡ್ಲು, ಕಾರ್ಯದರ್ಶಿ ಸುನಿಲ್ ಪಿ ಆರ್., ರವಿಶಂಕರ ಪುಣಿಚಿತ್ತಾಯ, ಗೋಪಾಲ ಆಚಾರಿ, ರಾಮಚಂದ್ರ ಆಚಾರಿ, ಸಂತೋಷ್, ರವಿ ಅರ್ಲಡ್ಕ ಜೊತೆಗಿದ್ದರು.