ಬದಿಯಡ್ಕ: ಆರಾಧನಾಲಯಗಳು ನಾಡಿನ ಶಕ್ತಿ ದ್ಯೋತಕಗಳಾಗಿವೆ. ದೇವಾಲಯಗಳ ಪುನರುಜ್ಜೀವನ ಜನಜೀವನವನ್ನು ಆಧಾತ್ಮಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಸದೃಢಗೊಳಿಸುವುದರೊಂದಿಗೆ ಶ್ರೇಯಸ್ಸನ್ನು ತರುತ್ತದೆ. ಜನರ ಶ್ರದ್ಧೆ, ಆಸಕ್ತಿಗಳಿಂದ ಜೀರ್ಣೋದ್ಧಾರ ಯಶಸ್ವಿಯಾಗುತ್ತದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಭಾನುವಾರ ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆಯಲ್ಲಿ ಅವರು ಆಶೀರ್ವಚನವನ್ನು ನೀಡಿ ಮಾತನಾಡಿದರು.
ಅತಿಶೀಘ್ರದಲ್ಲಿ ಶ್ರೀದೇವರ ಬ್ರಹ್ಮಕಲಶೋತ್ಸವವನ್ನು ನಡೆಸಿ ದೇವರನ್ನು ಮೂಲಾಲಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ಊರಿನ ಜನರ ಮನಸ್ಥಿತಿಯ ಫಲವಾಗಿ ಶ್ರೀಕ್ಷೇತ್ರವು ಸುಂದರವಾಗಿ ರೂಪುಗೊಳ್ಳುತ್ತಿದೆ ಎಂದರು. ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅಧ್ಯಕ್ಷ ಕೆ.ಕೆ.ಶೆಟ್ಟಿ ಉದ್ಘಾಟಿಸಿದರು. ಉದ್ಯಮಿ ಮಧುಸೂದನ ಆಯರ್ ಮಂಗಳೂರು, ಮಲಬಾರ್ ದೇವಸ್ವಮ್ ಬೋರ್ಡ್ ಎಸಿ ಮೆಂಬರ್ ಶಂಕರ ರೈ ಮಾಸ್ತರ್, ಡಾ ನರೇಶ್ ರೈ ದೆಪ್ಪುಣಿಗುತ್ತು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನರಸಿಂಹ ಭಟ್ ಕಾರ್ಮಾರು, ಶ್ರೀಕೃಷ್ಣ ಭಟ್ ಪುದುಕೋಳಿ, ಕೃಷ್ಣಮೂರ್ತಿ ಪುದುಕೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹೇಶ್ ವಳಕ್ಕುಂಜ ಸ್ವಾಗತಿಸಿ, ವಿಜಯಕುಮಾರ್ ಮಾನ್ಯ ವಂದಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಮಧುಸೂದÀನ ಆಯರ್ ಮಂಗಳೂರು, ಕಾರ್ಯದರ್ಶಿಯಾಗಿ ಮಹೇಶ್ ವಳಕ್ಕುಂಜ, ಉಪಸಮಿತಿಗಳನ್ನು ಹಾಗು ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆರಿಸಲಾಯಿತು.
ಅಭಿಮತ:
ಶಿಲಾಮಯ ಗರ್ಭಗುಡಿಯೊಂದಿಗೆ ಶ್ರೀಕ್ಷೇತ್ರವು ಸುಂದರವಾಗಿ ತಲೆಯೆತ್ತಿದ್ದು ಇದರ ಹಿಂದೆ ಪರಿಶ್ರಮ ಪಟ್ಟ ಊರಿನ ಜನತೆಯ ಒಗ್ಗಟ್ಟನ್ನು ತೋರಿಸಿಕೊಡುತ್ತದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಅವಕಾಶವು ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ.
- ಕೆ.ಕೆ.ಶೆಟ್ಟಿ, ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅಧ್ಯಕ್ಷ
………………………………..
ಮಳೆ ಭೂಮಿಗೆ ಬಿದ್ದು ಇಳೆ ತಂಪಾದಂತಹ ಸಮಯ, ಭೋರ್ಗರೆಯುವ ನದಿ ಸಮಾಧಾನ ಚಿತ್ತದಿಂದ ಹರಿಯುತ್ತಿರುವ ಕಾಲ ಶರತ್ಕಾಲ. ಈ ಪುಣ್ಯಕಾಲದಲ್ಲಿಯೇ ಗ್ರಾಮಕ್ಕೆ ವಿಶೇಷವಾದ ಫಲವನ್ನು ಅನುಗ್ರಹಿಸುವಂತಹ ಮಹಾವಿಷ್ಣು ದೇವರ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣಗೊಳ್ಳುತ್ತಿರುವುದೇ ವಿಶೇಷ.
- ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು, ಶ್ರೀಕ್ಷೇತ್ರದ ತಂತ್ರಿಗಳು
……………………………………………………………………………………….
-ಹೃದಯಶ್ರೀಮಂತಿಕೆ ಇವರು ಭಗವದ್ಭಕ್ತರ ಊರಾದ ಕಾರ್ಮಾರು ದೇವರ ಸನ್ನಿಧಿಗೆ ಆಗಮಿಸಿದಾಗ ಯಾವುದೇ ರೀತಿಯ ವೈಮನಸ್ಸು ವ್ಯತ್ಯಾಸಗಳನ್ನು ಕಾಣುವುದಿಲ್ಲ. ಸರ್ಕಾರದ ನಿಬಂಧನೆಗಳಿಗೆ ಅನುರೂಪವಾಗಿ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿ.
- ಶಂಕರ ರೈ ಮಾಸ್ತರ್, ಮಲಬಾರ್ ದೇವಸ್ವಂ ಬೋರ್ಡ್, ಎ.ಸಿ.ಸದಸ್ಯ
…………………………………………………………………………………………………..
-ಕೇವಲ 2 ವರ್ಷದಲ್ಲಿ ಮಹಾವಿಷ್ಣುವಿನ ಭವ್ಯವಾದ ದೇಗುಲ ಕಾರ್ಮಾರಿನಲ್ಲಿ ತಲೆಯೆತ್ತಿದೆ.
- ಬಿ.ವಸಂತ ಪೈ` ಬದಿಯಡ್ಕ