ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದೇಶಮಂಗಲ ದಿ. ಕೃಷ್ಣ ಕಾರಂತರ ಸಂಸ್ಮರಣಾ ಕಾರ್ಯಕ್ರಮ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ. 18ರಂದು ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಹರಿದಾಸ ಶೇಣಿ ಪರಂಪರೆಯನ್ನು ಮುಂದುವರಿಸುತ್ತಿರುವ ಶೇಣಿ ಬಾಲಮುರಳಿ ಅವರಿಂದ ಹರಿಕಥಾ ಕಾರ್ಯಕ್ರಮ, 11.30 ಕ್ಕೆ ರಾಧಾಕೃಷ್ಣ ಕೆ. ಉಳಿಯತಡ್ಕ ಇವರಿಂದ ದೇಶಮಂಗಲ ಕಾರಂತರ ಸಂಸ್ಕರಣೆ, ಕೆ. ಆರ್.ಆಳ್ವ ಕಂಬಾರು ಇವರ ಅಧ್ಯಕತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಜ್ಯೋತಿಷಿ ನಾರಾಯಣ ರಂಗಾಭಟ್ಟ ಮಧೂರು ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಶರ್ಮ ಕುಕ್ಕೆ ಸುಬ್ರಹ್ಮಣ್ಯ, ಉಮೇಶ ಶಿರೂರು ಫಣಿಯಪ್ಪಯ್ಯ ಪ್ರತಿಷ್ಠಾನ ಬೈಂದೂರು, ಉದ್ಯಮಿಗಳಾದ ಶ್ರೀಧರ ಶೆಟ್ಟಿ ಮುಟ್ಟಂ, ಗೋಪಾಲ ಶೆಟ್ಟಿ ಅರಿಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮದ್ಯಾಹ್ನ 2.30 ರಿಂದ ಪ್ರತಿಷ್ಠಾನದ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಭೀಷ್ಮವಿಜಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ತೆಂಕು ಬಡಗು ಖ್ಯಾತಿಯ ರಾಘವೇಂದ್ರ ಮಯ್ಯ ಹಾಲಾಡಿ ಭಾಗವತರಾಗಿ ಭಾಗವಹಿಸಲಿದ್ದಾರೆ. ರಾಧಾಕೃಷ್ಣ ಕಲ್ಚಾರ್, ಉಜಿರೆ ಅಶೋಕ್ ಭಟ್, ಸರ್ಪಂಗಳ ಈಶ್ವರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವೈಕುಂಠ ಹೇರ್ಳೆ ಸಾಸ್ತಾನ ಅರ್ಥಧಾರಿಗಳಾಗಿ ಭಾಗವಹಿಸುವರು.
ದೇಶಮಂಗಲ ಕೃಷ್ಣ ಕಾರಂತ ಅವರು ಕಾಸರಗೋಡಿನ ವಿದ್ವಾಂಸರ ಸಾಲಿನಲ್ಲಿ ಗುರುತಿಸಲ್ಪಟ್ಟಿದ್ದು, ದಾಮೋದರ ಅಗ್ಗಿತ್ತಾಯ ಬೈಲಂಗಡಿ, ಶೇಣಿ ಗೋಪಾಲಕೃಷ್ಣ ಭಟ್, ಕೋಟಕುಂಜ ನಾರಾಯಣ ಶೆಟ್ಟಿ, ಇವರ ಜತೆ ತಾಳಮದ್ದಳೆಯಲ್ಲಿ ಒಡನಾಡಿಯಾಗಿದ್ದವರು. ಉಳಿಯ ಧನ್ವಂತರಿ ಯಕ್ಷಗಾನ ಕಲಾ ಸಂಘದಲ್ಲಿ ಸಕ್ರಿಯ ಕಲಾವಿದರಾಗಿದ್ದರು. ಹಲವಾರು ಲೇಖನಗಳು, ಕರಕುಶಲ ಕೈಗಾರಿಕೆ, ಕೃಷಿ ಕ್ಷೇತ್ರ, ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು. ಹಿಂದಿನ ಕಾಲದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹಲವು ಯುವ ಕಲಾವಿದರಿಗೆ ಪೆÇ್ರೀತ್ಸಾಹ ನೀಡುತ್ತಾ ಬಂದಿದ್ದರು.