ಬದಿಯಡ್ಕ: ಕೊಲ್ಲಂಗಾನ ಸಮೀಪದ ಪಜ್ಜದಲ್ಲಿ ಪುನರ್ ನವೀಕರಣಗೊಳ್ಳುತ್ತಿರುವ ಶ್ರೀಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ನವೀಕರಣ ಕಾಮಗಾರಿಯ ವಿಜ್ಞಾಪನಾ ಪತ್ರ ಬಿಡುಗಡೆಯ ಅಂಗವಾಗಿ ಇತ್ತೀಚೆಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಂದ ಗಣಪತಿ ಗವನ, ಸಾಮೂಹಿಕ ಪ್ರಾರ್ಥನೆ, ಸಂಜೆ ಭಜನೆ ಮೊದಲಾದ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ಅನುಗ್ರಹ ಆಶೀರ್ವಚನ ನೀಡಿದ ಉಳಿಯತ್ತಾಯ ವಿಷ್ಣು ಆಸ್ರ ಅವರು, ಸಾಮಾಜಿಕ ಏಕತೆಗಾಗಿ ಭಜನಾ ಮಂದಿರಗಳು ಕಾರ್ಯೋತ್ಸಾಹಗಳಿಂದ ಚಟುವಟಿಕೆಗಳನ್ನು ವಿಸ್ತರಿಸಬೇಕು. ಕಲಿಯುಗದಲ್ಲಿ ದೇವ ಸಂಪ್ರೀತಿಗೆ ಭಜನೆ ಹೆಚ್ಚು ಫಲಪ್ರದವಾದುದು. ಯುವ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ, ಒಗ್ಗಟ್ಟಿನ ಮೂರ್ತರೂಪವಾಗಿ ಶ್ರೀಅಯ್ಯಪ್ಪ ಭಜನಾ ಮಂದಿರ ನವೀಕರಣಗೊಳ್ಳಲಿ ಎಂದು ಕರೆನೀಡಿದರು.
ಮಂದಿರದ ಪುನರ್ ನಿರ್ಮಾಣ ಸಮಿತಿ ರಕ್ಷಾಧಿಕಾರಿ ಪ್ರೊ.ಎ.ಶ್ರೀನಾಥ್ ಕಾಸರಗೋಡು,ಮಂದಿರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್ ಪಜ್ಜ, ಪ್ರಧಾನ ಕಾರ್ಯದರ್ಶಿ ವಾಮನ ನಾಯ್ಕ, ಸೇವಾ ಸಮಿತಿ ಅಧ್ಯಕ್ಷ ಪ್ರಮೋದ್ ಕುಮಾರ್ ಮೇಲತ್, ಕಾರ್ಯದರ್ಶಿ ಕೃಷ್ಣ ನಾಯ್ಕ ಅರಂತೋಡು, ಖಜಾಂಜಿ ತೇಜಸ್ ಕುಮಾರ್ ಅರಂತೋಡು, ಸದಸ್ಯರಾದ ಪರಮೇಶ್ವರ ನಾಯ್ಕ, ರಾಮಚಂದ್ರ, ಕೃಷ್ಣ ಕಲ್ಲಕಟ್ಟ, ಗೋಪಾಲಕೃಷ್ಣ ನಾಯ್ಕ, ಗಣೇಶ್ ಕೊಲ್ಲಂಗಾನ, ಬಟ್ಯ ನಾಯ್ಕ ಅರಂತೋಡು, ಸರೋಜಿನಿ ಶೇಷಪ್ಪ ನಾಯ್ಕ, ಪುಷ್ಪ, ದೇವಕಿ, ರಾಗಿಣಿ, ಶ್ರುತಿ, ಪರಮೇಶ್ವರಿ ಮೊದಲಾದವರು ಉಪಸ್ಥಿತರಿದ್ದು ನೇತೃತ್ವ ವಹಿಸಿದ್ದರು.