ಪತ್ತನಂತಿಟ್ಟ: ಮೊಬೈಲ್ ಖರೀದಿಸಲು ಮನೆಯವರು ನಿರಾಕರಿಸಿದ್ದನ್ನು ವಿರೋಧಿಸಿ ಪ್ಲಸ್ ಟು ವಿದ್ಯಾರ್ಥಿಯೊಬ್ಬ ನದಿಗೆ ಹಾರಿದ ಘಟನೆ ನಡೆದಿದೆ.ರಾನ್ನಿ ಅಂಗಾಡಿ ಮೂಲದ ವಿದ್ಯಾರ್ಥಿ ರಾನ್ನಿ ವಲಿಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ. .
ಸೋಮವಾರ ಸಂಜೆ ಸೈಕಲ್ ನಲ್ಲಿ ಬಂದ ವಿದ್ಯಾರ್ಥಿ ಸೇತುವೆ ಬಳಿಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಜನರು ಧಾವಿಸಿ ಬರುವಷ್ಟರಲ್ಲಿ ವಿದ್ಯಾರ್ಥಿ ಈಜಿ ದಡಕ್ಕೆ ಬಂದಿದ್ದ. ನೀರು ಕಡಿಮೆಯಾದ ಕಾರಣ ವಿದ್ಯಾರ್ಥಿ ಮುಳುಗದೆ ಭಾರೀ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈಜಿ ಮರಳಿದ ವಿದ್ಯಾರ್ಥಿಯನ್ನು ಸ್ಥಳೀಯರು ರಾನ್ನಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಾಲಕನಿಗೆ ಯಾವುದೇ ಗಾಯವಾಗಿಲ್ಲ. ಮಾಹಿತಿ ತಿಳಿದ ಮನೆಯವರು ಆಸ್ಪತ್ರೆಗೆ ಆಗಮಿಸಿ ಸಂತೈಸಿದರು.