ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ಕ್ಷೇತ್ರದ ಸಾಂಸ್ಕøತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ, ವಿಜ್ಡಮ್ ಇನ್‍ಸ್ಟಿಟ್ಯೂಟ್ ನೆಟ್ವರ್ಕ್ ಹಾಗೂ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ಭಾನುವಾರ ಅಪರಾಹ್ನ ಪಾಂಗೋಡು ಕ್ಷೇತ್ರದ 'ಶ್ರೀ ದುಗಾರ್ಂಬಾ ವೇದಿಕೆ'ಯಲ್ಲಿ ಕನ್ನಡ ಭವನದ ಕೆ ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಸಾರಥ್ಯದಲ್ಲಿ ಕಾಸರಗೋಡು ದಸರಾ ಸಾಹಿತ್ಯ ಸಾಂಸ್ಕೃತಿಕೋತ್ಸವ-2024' ನಡೆಯಿತು.
ಕಾರ್ಯಕ್ರಮದಲ್ಲಿ ಕುಣಿತ ಭಜನೆ, ಭಜನೆ, ಸತ್ಸಂಗ ಹಾಗೂ ಶಾಂತಾ ಕುಂಟಿನಿ ಸಾರಥ್ಯದ ಉಪ್ಪಿನಂಗಡಿಯ ಸತ್ಯಶಾಂತ ಪ್ರತಿμÁ್ಠನದ ಸದಸ್ಯರಿಂದ 'ಗಾನಲಹರಿ' ನಡೆಯಿತು. ಬಳಿಕ ನಡೆದ ಕಾಸರಗೋಡು ದಸರಾ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕವಿ ವಿ ಬಿ ಕುಳಮರ್ವ ವಹಿಸಿದ್ದರು. ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಸ್ಥಾಪಕ ಅಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ, ಕೆ. ಪಿ ಪ್ರಕಾಶ್ಚಂದ್ರ, ಪ್ರಾಂಶುಪಾಲ ಕೆ ಪಿ ರಮೇಶ್ಚಂದ್ರ ಇದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿಯಿಂದ ವಿ ಬಿ ಕುಳಮರ್ವ- ಲಲಿತಾಲಕ್ಷ್ಮೀ ಕುಳಮರ್ವ ದಂಪತಿಗೆ 'ಕಾಸರಗೋಡು ದಸರಾ ಸನ್ಮಾನ' ನಡೆಯಿತು. ನಾಡಿನ ಖ್ಯಾತ ಕವಿಗಳಾದ ಡಾ. ಕೆ. ಜಿ. ವೆಂಕಟೇಶ್ ಶಿವಮೊಗ್ಗ , ಡಾ. ಕೊಳಚಪ್ಪೆ ಗೋವಿಂದ ಭಟ್, ಪಿ. ವಿ. ಪ್ರದೀಪ್ ಕುಮಾರ್, ಮಂಗಳೂರು, ರಾಧಾಕೃಷ್ಣ ಕೆ ಉಳಿಯತ್ತಡ್ಕ , ಲಕ್ಷ್ಮೀ ವಿ ಭಟ್, ಜಯಾನಂದ ಪೆರಾಜೆ, ನಾಟಕ ಭಾರ್ಗವ ಕೆಂಪರಾಜು, ವಿರಾಜ್ ಅಡೂರು, ಸೀತಾಲಕ್ಷ್ಮಿ ವರ್ಮ ವಿಟ್ಲ, ಶಾಂತಾ ಪುತ್ತೂರು, ರತ್ನಾ ಕೆ ಭಟ್ ತಲಂಜೇರಿ ಇವರಿಗೆ 'ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ 2024' ಪ್ರದಾನ ಮಾಡಲಾಯಿತು. ಬಳಿಕ ನಡೆದ ಭಕ್ತಿಪ್ರಧಾನ ಕವಿಗೋಷ್ಟಿಯಲ್ಲಿ ಶ್ರೀಹರಿ ಭಟ್ ಪೆಲ್ತಾಜೆ, ರೇಖಾ ಸುದೇಶ್ ರಾವ್, ಅನ್ನಪೂರ್ಣ ಎನ್ ಕುತ್ತಾಜೆ, ಕುಸುಮಾಕರ ಅಂಬೆಕಲ್ಲು, ರವೀಂದ್ರನ್ ಪಾಡಿ, ವಿದ್ಯಾ ರಕ್ಷಿತ್ ಪುತ್ತೂರು, ರೇಖಾ ರೋಶನ್ ಮಲ್ಲಿಗೆಮಾಡು, ಚಂಚಲಾಕ್ಷಿ ಶಾಮಪ್ರಕಾಶ್ ಕಾಸರಗೋಡು, ಮೇಘ ಶಿವರಾಜ್ ಬೀರಂತಬೈಲ್, ಅನಿತಾ ಶೆಣೈ, ನಿರ್ಮಲಾ ಶೇಷಪ್ಪ ಕುಲಾಲ್ ಖಂಡಿಗೆ, ಶುಭಾಷಿಣಿ ಚಂದ್ರ ಬೇಕೂರು, ಶಿವಾನಿ ಕೆ ಪೈವಳಿಕೆ, ಪ್ರಿಯಾ ಬಾಯಾರು, ಸುಜಿತ್ ಕುಮಾರ್ ಬೇಕೂರು, ಶಶಿಕಲಾ ಟೀಚರ್ ಕುಂಬಳೆ, ಹಿತೇಶ್ ಕುಮಾರ ನೀರ್ಚಾಲ್, ಗಿರೀಶ್ ಪಿ ಎಂ ಚಿತ್ತಾರಿ, ಸುಶೀಲಾ ಕೆ ಪದ್ಯಾಣ, ಸಂಧ್ಯಾಗೀತಾ ಬಾಯಾರು, ಗಾಯತ್ರಿ ಪಳ್ಳತ್ತಡ್ಕ, ಗಿರೀಶ್ ಪೆರಿಯಡ್ಕ ಉಪ್ಪಿನಂಗಡಿ, ಶ್ವೇತಾ ಡಿ ಬಂಟ್ವಾಳ ಭಾಗವಹಿಸಿವರು. ಕಾಸರಗೋಡು ಜಿಲ್ಲೆಯ ಪದವಿ ಕಾಲೇಜಿನ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭರವಸೆಯ ಬೆಳಕು 2024 ಗೌರವ ಪ್ರದಾನ ನಡೆಯಿತು. ವಿಜ್ಡಮ್ ಇನ್‍ಸ್ಟಿಟ್ಯೂಟ್ ನೆಟ್ವರ್ಕ್ ಮುಖ್ಯಸ್ಥ ಅಭಿಲಾμï ಕ್ಷತ್ರಿಯ ಗೌರವ ಪ್ರದಾನ ಮಾಡಿದರು. ಕೆ ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ವಸಂತ ಕೆರೆಮನೆ ವಂದಿಸಿದರು. ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.