ತಿರುವನಂತಪುರಂ: ನಿನ್ನೆಯ ನಡೆದ ತಿರುವೋಣಂ ಲಾಟರಿ ಡ್ರಾದಲ್ಲಿ ಬಂಪರ್ ಪ್ರಥಮ ಬಹುಮಾನದ ಅದೃಷ್ಟಶಾಲಿ ವಿಜೇತರಿಗಾಗಿನ ಕಾಯುವಿಕೆ ಕೊನೆಗೊಂಡಿದೆ.
ಕರ್ನಾಟಕದ ಪಾಂಡವಪುರ ಮೂಲದ ಅಲ್ತಾಫ್ ಎಂಬಾತನಿಗೆ 25 ಕೋಟಿ ರೂ.ಪ್ರಥಮ ಬಹುಮಾನ ಲಭಿಸಿರುವುದು ಖಚಿತಗೊಂಡಿದೆ. ಅಲ್ತಾಫ್ ಮೆಕ್ಯಾನಿಕ್. 15 ವರ್ಷಗಳಿಂದ ಲಾಟರಿ ಖರೀದಿಸುತ್ತಿರುವುದಾಗಿ ಅಲ್ತಾಫ್ ಹೇಳಿದ್ದಾರೆ.
ಕಳೆದ ತಿಂಗಳು ಬತ್ತೇರಿಯಿಂದ ಟಿಕೆಟ್ ಖರೀದಿಸಿರುವುದಾಗಿ ಅಲ್ತಾಫ್ ಹೇಳಿದ್ದಾರೆ. ದೇವರು ಕೊನೆಗೂ ಕೈನೀಡಿ ಆಧರಿಸಿದ ಎಂದು ಅಲ್ತಾಫ್ ಮೊದಲ ಪ್ರತಿಕ್ರಿಯೆ ನೀಡಿರುವರು. ಸ್ವಂತ ಮನೆ ನಿರ್ಮಿಸಿ ಬಳಿಕ ಮಕ್ಕಳ ವಿವಾಹವನ್ನು ನೆಮ್ಮದಿಯಿಂದ ಪೂರೈಸಬೇಕು ಎಂದು ಅಲ್ತಾಫ್ ಹೇಳಿದ್ದಾರೆ.
ಬಹುಮಾನ ವಿಜೇತ ಲಾಟರಿಯನ್ನು ವಯನಾಡ್ ಸುಲ್ತಾನ್ ಬತ್ತೇರಿಯ ಎನ್‍ಜಿಆರ್ ಲಾಟರಿ ಕೇಂದ್ರದಿಂದ ಖರೀದಿಸಿದ್ದರು. ಪನಮರಮ್‍ನಲ್ಲಿರುವ ಎಸ್‍ಜಿ ಲಕ್ಕಿ ಸೆಂಟರ್‍ನಿಂದ ಎನ್‍ಜಿಆರ್‍ಗೆ ಟಿಕೆಟ್ ನೀಡಲಾಗಿದೆ. ಎಸ್‍ಜಿ ಲಕ್ಕಿ ಸೆಂಟರ್ ಏಜೆಂಟ್ ಎಎಮ್ ಗಿನೇಶ್. ಕಳೆದ 20 ವರ್ಷಗಳಿಂದ ಲಾಟರಿ ಏಜೆಂಟರಾಗಿದ್ದು, ಇದೇ ಮೊದಲ ಬಾರಿಗೆ ಬಂಪರ್‍ನ ಮೊದಲ ಬಹುಮಾನ ಪಡೆದಿರುವುದಾಗಿ ತಿಳಿಸಿದರು.
ಎನ್ ಜಿಆರ್ ಲಾಟರಿ ಏಜೆಂಟ್ ನಾಗರಾಜ್ ಪ್ರತಿಕ್ರಿಯಿಸಿ, ತಿಂಗಳ ಹಿಂದೆ ಮಾರಾಟವಾದ ಟಿಕೆಟ್ ಗೆ ಬಹುಮಾನ ಬಂದಿದೆ. ತುಂಬಾ ಖುಷಿಯಾಗಿದೆ ಎಂದರು.
ಕಳೆದ ಬಾರಿ ತಮಿಳುನಾಡಿನಿಂದ ಬಂದಿದ್ದ ನಾಲ್ವರ ತಂಡಕ್ಕೆ ಬಂಪರ್ ಬಹುಮಾನ ಲಭಿಸಿತ್ತು.