ಕಾಸರಗೋಡು : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದಲ್ಲಿ ಆಫೀಸ್ ಅಟೆಂಡೆಂಟ್, ಪ್ಯೂನ್ ಹುದ್ದೆಗೆ ಮಾಸಿಕ 18390ರೂ. ಸಂಚಿತ ವೇತನದೊಂದಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಸುವುದಕ್ಕೆ ನ್ಯಾಯಾಲಯದ ಅರ್ಹ ನಿವೃತ್ತ ಸಿಬ್ಬಂದಿಯಿಂದ ಮತ್ತು ಇತರ ಸರ್ಕಾರಿ ನೌಕರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಎಸ್‍ಸಿ ನಿಶ್ಚಯಿಸಿದ ಅರ್ಹತೆ ಮತ್ತು ಐದು ವರ್ಷಗಳ ಕೆಲಸದ ಅನುಭವ, 62 ವರ್ಷ ಪೂರ್ತಿಗೊಳ್ಳದ ಅರ್ಜಿದಾರರಿಗೆ ಅವಕಾಶ ಕಲ್ಪಿಸಲಾಗಿದೆ. 62 ವರ್ಷ ಪೂರ್ಣಗೊಂಡ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ. ಸರ್ಕಾರದ ಪರವಾಗಿ ಜಿಲ್ಲಾ ನ್ಯಾಯಾಧೀಶರು ಮತ್ತು ನೇಮಕಗೊಳ್ಳುವ ವ್ಯಕ್ತಿಯ ನಡುವೆ ಒಪ್ಪಂದದ ಮೆಮೊರಾಂಡಮನ್ನು ನಮೂದಿಸಬೇಕು.
ನಿಗದಿತ ನಮೂನೆಯಲ್ಲಿ ಅರ್ಜಿ ಬರೆದು, ವಯಸ್ಸು ಮತ್ತು ಅರ್ಹತಾ ಕೆಲಸದ ಅನುಭವವನ್ನು ಸಾಬೀತುಪಡಿಸುವ ಪ್ರಮಾಣಪತ್ರ, ದೃಢೀಕೃತ ಪ್ರತಿಗಳ ಸಹಿತ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯ, ಕಾಸರಗೋಡು-671123 ಎಂಬ ವಿಳಾಸಕ್ಕೆ ಅಕ್ಟೋಬರ್ 25 ರಂದು ಸಂಜೆ 5 ರ ಮುಂಚಿತವಾಗಿ ಖುದ್ದು ಅಥವಾ ಅಂಚೆ ಮೂಲಕ ( ಕವರ್ ನ ಮೇಲೆ 'ಒಪ್ಪಂದದ ನೇಮಕಾತಿಗಿರುವ ಅರ್ಜಿ' ಎಂದು ಬರೆಯಬೇಕು)ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ವೆಬ್‍ಸೈಟ್ https://kasaragod.dcourts.gov.in ಗೆ ಭೇಟಿ ನೀಡಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994-256390)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.