ಮುಂಬೈ: ಜಗತ್ತಿನ ಯಾವುದೇ ಶಕ್ತಿಯು ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣ ನಡೆಸುವ ಜಾತಿ ಗಣತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.
ಮುಂಬೈ: ಜಗತ್ತಿನ ಯಾವುದೇ ಶಕ್ತಿಯು ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣ ನಡೆಸುವ ಜಾತಿ ಗಣತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.
ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, 'ಇಂಡಿಯಾ ಬಣ ಜಾತಿ ಗಣತಿಗೆ ಬದ್ಧವಾಗಿದೆ.
ಆರ್‌ಎಸ್‌ಎಸ್ ಅಥವಾ ಬಿಜೆಪಿ, ಪ್ರಧಾನಿ ಮೋದಿ ಅಥವಾ ವಿಶ್ವದ ಯಾವ ಶಕ್ತಿಯು ಇಂಡಿಯಾ ಬಣ ನಡೆಸುವ ಜಾತಿ ಗಣತಿಯನ್ನು ತಡೆಯಲು ಸಾಧ್ಯವಿಲ್ಲ. ಪ್ರಸ್ತುತ ಮೀಸಲಾತಿಯ ಅಂಕಿ-ಅಂಶ ನೈಜತೆಯಿಂದ ಕೂಡಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಶೇ 50ರಷ್ಟು ಮೀಸಲಾತಿಯನ್ನು ತೊಡೆದು ಹಾಕಲಾಗುವುದು ಎಂದು ಹೇಳಿದ್ದಾರೆ.
'ನಮಗೆ ಸರಿಯಾದ ಅಂಕಿ- ಅಂಶ ಬೇಕು. ದಲಿತರು, ಹಿಂದುಳಿದ ವರ್ಗ, ಬುಡಕಟ್ಟುಗಳು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ಜಾತಿಯ ಜನರು ಎಷ್ಟು ಪ್ರಮಾಣದಲ್ಲಿದ್ದಾರೆ. ಜಾತಿ ಜನಗಣತಿಯಿಂದಾಗಿ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಜಾತಿ ಗಣತಿ ನಡೆಸುವ ಮೂಲಕ ನಿಜವಾದ ಅಂಕಿ ಅಂಶ ಲಭ್ಯವಾಗಲಿದ್ದು. ಆ ಮೂಲಕ ದಲಿತರು, ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸ್ಥಾನಮಾನಗಳು ದೊರಯಲಿದೆ ಎಂದು ತಿಳಿಸಿದ್ದಾರೆ.