ಬದಿಯಡ್ಕ: ತುಳುಲಿಪಿ ದಿನಾಚರಣೆಯನ್ನು ಆಲಿಂಜ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಆಚರಿಸಲಾಯಿತು.
ತುಳುಲಿಪಿ ಬ್ರಹ್ಮ ಡಾ. ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನವನ್ನು ತುಳುಲಿಪಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ದೇವಸ್ಥಾನದ ಸೇವಾಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸಂತೋಷ್ ರೈ ಗಾಡಿಗುಡ್ಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಭಂಡಾರಿ ಬೆಳಿಂಜ ಹೊಸಮನೆ, ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕುಂಜತ್ತಾಯ ಮಲ್ಲಾರ, ಕೋಶಾಧಿಕಾರಿ ಹರ್ಷಕುಮಾರ್ ರೈ ಮೇಗಿನಬೆಳಿಂಜ, ಜಗನ್ನಾಥ ಶೆಟ್ಟಿ, ಹರೀಶ ನಾಯ್ಕ ಪಾಲ್ಗೊಂಡು ಮಾತನಾಡಿದರು. ಅಮೃತರಾಜ ರೈ ಮರತ್ತಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರ್ಷರಾಜ ಭಂಡಾರಿ ಬೆಳಿಂಜ ಹೊಸಮನೆ ಸ್ವಾಗತಿಸಿ, ಕೃಷ್ಣ ಡಿ.ಬೆಳಿಂಜ ವಂದಿಸಿದರು.