ಚೆರುತೋಣಿ: ಕೆಎಸ್ ಇಬಿ ಕಚೇರಿಗಳ ಮೇಲಿನ ದಾಳಿ ಹಾಗೂ ನೌಕರರ ಮೇಲಿನ ಅತಿಕ್ರಮಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿದ್ಯುತ್ ಸಚಿವ ಕೆ.ಕೃಷ್ಣನ್‍ಕುಟ್ಟಿ ಎಚ್ಚರಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಕೆಎಸ್‍ಇಬಿ ವಿರುದ್ಧದ ಪ್ರಚಾರಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿರುವರು.
ಇಡುಕ್ಕಿ ಜಿಲ್ಲೆಯ ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗೆ 217.9 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಮಂಜೂರಾಗಿದೆ ಎಂದು ಸಚಿವರು ತಿಳಿಸಿದರು. ವಿಶೇಷ ಪ್ಯಾಕೇಜ್ 2026 ರಲ್ಲಿ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ. ರಾಮಕಲ್ಮೆಟ್‍ನಲ್ಲಿ 220 ಕೆವಿ ಉಪ ಕೇಂದ್ರ ಸೇರಿದಂತೆ ಐದು ಹೊಸ ಉಪ ಕೇಂದ್ರಗಳ ನಿರ್ಮಾಣ, ಇತರ ಕೇಂದ್ರಗಳ ಸಾಮಥ್ರ್ಯ ವರ್ಧನೆ, 103 ಕಿಮೀ ಉದ್ದದ ವಿದ್ಯುತ್ ಮಾರ್ಗ ಇತ್ಯಾದಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಶೇಕಡ ಅರವತ್ತರಷ್ಟು ಕೊಡುಗೆ ನೀಡುವ ಇಡುಕ್ಕಿ ಜಿಲ್ಲೆಯ ಪವರ್ ಗ್ರಿಡ್ ಅಭಿವೃದ್ಧಿಗೆ ಟ್ರಾನ್ಸ್‍ಗ್ರಿಡ್ ಯೋಜನೆಯಲ್ಲಿ 253 ಕೋಟಿ, ಆರ್‍ಡಿಎಸ್‍ಎಸ್ ಯೋಜನೆಯಲ್ಲಿ 52 ಕೋಟಿ, ಇಡುಕ್ಕಿ ಪ್ಯಾಕೇಜ್‍ನಲ್ಲಿ 217 ಕೋಟಿ ಮತ್ತು 120 ಕೋಟಿ ರೂ. ದ್ಯುತಿ ಪ್ರಾಜೆಕ್ಟ್ ಪ್ರಸ್ತುತ ನಡೆಯುತ್ತಿದೆ.
ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ 958.5 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿದೆ. 2010 ರ ನಂತರ ಜಲವಿದ್ಯುತ್ ಉತ್ಪಾದನೆಯಲ್ಲಿ ದೊಡ್ಡ ಜಿಗಿತ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.