HEALTH TIPS

ಕೋಟೆಚಾವಡಿ ಪಳ್ಳದ ಕೊಟ್ಯ ಶ್ರೀ ಧೂಮಾವತೀ, ಪರಿವಾರ ದೈವಗಳ ನೇಮೋತ್ಸವ

ಕಾಸರಗೋಡು : ಇತಿಹಾಸ ಪ್ರಸಿದ್ಧ ಕಾಸರಗೋಡು ಕೋಟೇಚಾವಡಿಯ ಪಳ್ಳದ ಕೊಟ್ಯ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಅ. 31ರಂದು ಬೆಳಿಗ್ಗೆ 10 ಕ್ಕೆ ಕಾಸರಗೋಡು ಕೋಟೆ ರಸ್ತೆಯಲ್ಲಿರುವ ಶ್ರೀ ದೂಮಾವತಿ ಕೋಟೆ ಚಾವಡಿಯಲ್ಲಿ ನಡೆಯಲ್ಲಿರುವುದು.

ಕಾಸರಗೋಡು ಕೋಟೆ ನಾಯಕರ ವಂಶಸ್ಥರ ನೇತೃತ್ವದಲ್ಲಿ ಸಮಾಜ ಬಾಂಧವರ ಹಾಗೂ ಊರವರ ಸಹಕಾರದೊಂದಿಗೆ  ದೀಪಾವಳಿ ನೇಮೋತ್ಸವ ಆಯೋಜಿಸಲಾಗುತ್ತಿದೆ.  

31ರಂದು ಸಂಜೆ ಆರು ಗಂಟೆಗೆ ನೆಲ್ಲಿಕುಂಜೆ ಪಳ್ಳದಕೋಟ್ಯ ದೂಮಾವತಿ ದೈವಸ್ಥಾನದಿಂದ ಭಂಡಾರ ಹೊರಡಲಿರುವುದು. ರಾತ್ರಿ 8ಕ್ಕೆ ಕೋಟೆ ಚಾವಡಿಯಲ್ಲಿ ಉತ್ಸವ ಆರಂಭಗೊಳ್ಳುವುದು. 8.30ಕ್ಕೆ ಗುಳಿಗನ ಕೋಲ ನಡೆಯಲಿರುವುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries