ಕುಂಬಳೆ: ಬಾಡೂರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಿಕೆ ಹಾಗೂ ಕಮ್ಯುನಿಸ್ಟ್ ಪಕ್ಷದ ನೇತಾರೆ ಸಚಿತ .ಬಿ . ರೈ ಉದ್ಯೋಗ ಭರವಸೆ ನೀಡಿ ಕೋಟ್ಯಂತರ ರೂಪಾಯಿಗಳ ವಂಚನೆ ನಡೆಸಿರುವುದು ಬೆಳಕಿಗೆ ಬಂದು ದಿನ ಹಲವು ಕಳೆದರೂ ಇದುವರೆಗೆ ಶಾಲೆಯಿಂದ ಅಮಾನತುಗೊಳಿಸದಿರುವುದರಲ್ಲಿ ಆಡಳಿತ ಪಕ್ಷದ ಸಂಪೂರ್ಣ ಬೆಂಬಲ ಎದ್ದು ಕಾಣುತ್ತಿದೆ ಎಂದು ಆರೋಪಿಸಲಾಗಿದೆ.
ವಿದ್ಯಾಭ್ಯಾಸ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಪ್ರಬಂಧಕರಾಗಿರುವ ಬಾಡೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೂ ಈ ಭ್ರಷ್ಟ ಶಿಕ್ಷಕೀಯ ಮೇಲೆ ಕ್ರಮ ಕೈಗೊಳ್ಳದಿರುವುದರಿಂದ ಶಾಲಾ ಆಡಳಿತ ಮಂಡಳಿಯು ಎಲ್ಲಾ ಅವ್ಯವಹಾರಗಳಿಗೆ ಮೌನ ಸಮ್ಮತಿಯನ್ನು ನೀಡಿರುವುದು ಸ್ಪಷ್ಟವಾಗಿದೆ. ಆದುದರಿಂದ ಶಿಕ್ಷಣ ಇಲಾಖೆಯು ಅವ್ಯವಹಾರಗಳಲ್ಲಿ ಶಾಲೆಗೆ ಸಂಬಂಧಪಟ್ಟ ಇತರ ವ್ಯಕ್ತಿಗಳಿಗಿರುವ ಸಂಬಂಧವನ್ನು ತನಿಖೆ ನಡೆಸಬೇಕೆಂದು ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಆಗ್ರಹಪಟ್ಟಿದ್ದಾರೆ.