ನವದೆಹಲಿ: ಬಿಜೆಪಿ ಪಕ್ಷವು 'ಸಕ್ರಿಯ ಸದಸ್ಯತ್ವ ಅಭಿಯಾನ'ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮೊದಲ ಸಕ್ರಿಯ ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನ ಕಾರ್ಯದರ್ಶಿ ಹಾಗೂ ದೇಶದಾದ್ಯಂತದ ಸದಸ್ಯತ್ವ ಅಭಿಯಾನದ ಸಂಚಾಲಕರೂ ಆಗಿರುವ ವಿನೋದ್ ತಾವಡೆ ನೇತೃತ್ವದಲ್ಲಿ ಮೋದಿ ಸದಸ್ಯತ್ವ ಸ್ವೀಕರಿಸಿದರು.
ಪಕ್ಷದ ಒಬ್ಬ ಸಕ್ರಿಯ ಸದ್ಯ ಒಂದು ಬೂತ್ ಅಥವಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 50 ಜನರನ್ನು ಪಕ್ಷದ ಸದಸ್ಯರಾಗಿ ನೋಂದಣಿ ಮಾಡಿಸಬೇಕು. ಆಗ ಮಾತ್ರ ಅವರು, ಅಭಿಯಾನ ಮುಗಿದ ಬಳಿಕ ನಡೆಯಲಿರುವ ಪಕ್ಷದ ಸಾಂಸ್ಥಿಕ ಚುನಾವಣೆಗಳಲ್ಲಿ ಭಾಗವಹಿಸಬಹುದು
ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಪ್ರಯತ್ನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಬಿಜೆಪಿಯ ಕಾರ್ಯಕರ್ತನಾಗಿ, ಮೊದಲ ಸಕ್ರಿಯ ಸದಸ್ಯ ಆಗಲು ಮತ್ತು ಇಂದು ಸಕ್ರಿಯ ಸದಸ್ಯತಾ ಅಭಿಯಾನವನ್ನು ಪ್ರಾರಂಭಿಸುತ್ತಿರುವುದಕ್ಕೆ ಹೆಮ್ಮೆಪಡುತ್ತೇವೆ. ಇದು ನಮ್ಮ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಆಂದೋಲನವಾಗಿದೆ.ರಾಷ್ಟ್ರೀಯ ಪ್ರಗತಿಗಾಗಿ ನಮ್ಮ ಪಕ್ಷದ ಕಾರ್ಯಕರ್ತರ ಪರಿಣಾಮಕಾರಿ ಕೊಡುಗೆಯನ್ನು ಖಚಿತಪಡಿಸುತ್ತದೆ ಎಂದಿದ್ದಾರೆ.
ಸಕ್ರಿಯ ಸದಸ್ಯರು ಮಂಡಲ ಸಮಿತಿ ಮತ್ತು ಅದರ ಮೇಲಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಜೊತೆಗೆ, ಮುಂಬರುವ ದಿನಗಳಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಸಿಗಲಿದೆ ಎಂದು ಮೋದಿ ಹೇಳಿದ್ದಾರೆ.