HEALTH TIPS

ನೃತ್ಯ-ಗಾಯನದಲ್ಲಿ ಭರವಸೆಯ ಪ್ರತಿಭೆ: ಬೆರಗು ಮೂಡಿಸಿದ ಬಿಎಸ್ಸಿ ವಿದ್ಯಾರ್ಥಿನಿ ಅನುಷಾರ ಸಾಧನೆ: ನಾಡಿಗೆ ಹೆಮ್ಮೆ

 ಉಪ್ಪಳ.ತಾಳ ನೃತ್ಯಗಳ ಅದ್ಭುತ ಪ್ರದರ್ಶನದ ಮೂಲಕ ಮಂಗಳೂರಿನ ಕಂಕನಾಡಿಯಲ್ಲಿ ಬಿಎಸ್ಸಿ ವಿದ್ಯಾರ್ಥಿನಿ ಅನುಷಾ ಎ.ಅವರ ಭರತನಾಟ್ಯ ಪ್ರದರ್ಶನ ಗಮನ ಸೆಳೆದು ಅಚ್ಚರಿಮೂಡಿಸಿತು.

ಮಂಗಲ್ಪಾಡಿ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ಬಾಲಕೃಷ್ಣ ಎ ಮತ್ತು ಚಿತ್ರಾ ದಂಪತಿಯ ಪುತ್ರಿಯಾದ ಅನುಷಾ ಎ.ಅವರ ಕೌತುಕಪೂರ್ಣ ಭರತನಾಟ್ಯ ಪ್ರದರ್ಶನವು ಭರವಸೆಯ ಕಲಾವಿದೆಯಾಗಿ ಮಿಂಚುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಹದಿಹರೆಯದ ವಿದ್ಯಾರ್ಥಿನಿಯಾಗಿರುವ ಅನುಷಾ ನೃತ್ಯ ಕಲೆಯಲ್ಲಿ ಎತ್ತರಕ್ಕೆ ಏರುವ ಆಸೆ ವ್ಯಕ್ತಪಡಿಸಿ ಮುನ್ನಡೆಯುತ್ತಿದ್ದಾಳೆ. ಶಾಸ್ತ್ರೀಯ ನೃತ್ಯ ಅಭ್ಯಸಿಸಿರುವ ಈ ಪ್ರತಿಭೆ ತನ್ನ ವಿಸ್ಮಯಕರ ನಡೆಗಳು ಮತ್ತು ಹಾಡುಗಳಿಂದ ಪ್ರೇಕ್ಷಕರಿಗೆ ಕುತೂಹಲವನ್ನುಂಟು ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.


ಚಿಕ್ಕವಯಸ್ಸಿನಲ್ಲೇ ಅನುಷಾಳ ನೃತ್ಯ ಮತ್ತದರಲ್ಲಿ ಅಪರಿಮಿತ ಒಲವು ಅನುಷಾಳನ್ನು ನೃತ್ಯ ಕಲಾವಿದೆಯನ್ನಾಗಿ ಮಾಡಿತು.  ಐಲ ಶಾರದಾಬೋವಿ ಶಾಲೆಯಲ್ಲಿ ಓದುತ್ತಿರುವಾಗಲೇ ಅಲ್ಲಿನ ಶಿಕ್ಷಕರಲ್ಲಿ ಆರಂಭಿಕ ನೃತ್ಯ ಕಲಿತರು. ಕಳೆದ ಒಂಬತ್ತು ವರ್ಷಗಳಿಂದ ಅನುಷಾ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೇಡಿಕೆಯ ಭಜನಾ ಕೀರ್ತನಕಾರಳಾಗಿಯೂ ಗಮನಸೆಳೆದಿದ್ದಾರೆ.


ಅನುಷಾ ಅವರ ತಂಡ ಎಂಟು ಮಕ್ಕಳನ್ನು ಒಳಗೊಂಡಿದೆ. ಬಹುಭಾಷೆಗಳ ಸಂಗಮವಾದ ಕಾಸರಗೋಡಿನಲ್ಲಿ ಇಂತಹ ನೃತ್ಯಕಲೆಗಳಿಗೆ ಹೆಚ್ಚು ಜನ ಬೆಂಬಲಿಸುವುದು ಅಷ್ಟಕ್ಕಷ್ಟೆ. ಈ ಹಿನ್ನೆಲೆಯಲ್ಲಿ ಅನುಷಾಳ ನೃತ್ಯ-ಗಾಯನ ಕಲಾಸಕ್ತಿ, ಆ ನಿಟ್ಟಿನ ಅವಿರತ ಸಾಧನೆ ಗಮನಾರ್ಹವಾಗಿದೆ.

ಅನುಷಾ ಅವರ ತಂದೆ ಬಾಲಕೃಷ್ಣ ಅವರು ಐಲ ಶ್ರೀಕ್ಷೇತ್ರದಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದಾರೆ. ಕೆಲಸ ಸ್ಥಿರವಾಗಿದ್ದರೆ ತನ್ನ ಪುತ್ರಿಗೆ ಇತರ ಕಲೆಗಳಲ್ಲಿ ತರಬೇತಿ ನೀಡುವುದು ಸಾಧ್ಯವಾಗುತ್ತಿತ್ತು ಎನ್ನುತ್ತಾರೆ ಬಾಲಕೃಷ್ಣ ಅವರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries