HEALTH TIPS

"ಒಂದು ಜೊತೆ ಖಾದಿ ಬಟ್ಟೆ ಖರೀದಿಸೋಣ" : ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಿಂದ ಅಭಿಯಾನ ಉದ್ಘಾಟನೆ

ತಿರುವನಂತಪುರಂ: ಖಾದಿ ವಸ್ತ್ರಗಳ ಸೆಟ್ ಖರೀದಿಸಿ ಬಿಲ್ ಪಾವತಿಸುವಂತೆ ಕೇಂದ್ರ ಸಚಿವರು ಹೇಳಿದಾಗ ಕೌಂಟರ್ ನಲ್ಲಿದ್ದ ಮಹಿಳೆಗೆ ಗಾಬರಿ ಮತ್ತು ಅನುಮಾನ ಉಂಟಾಯಿತು. 

ಸಚಿವರೊಂದಿಗೆ ಇದ್ದ ಗಾಂಧಿ ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ಡಾ. ಜೇಕಬ್ ಪುಲಿಕನ್ನ ಇದನನು ಗಮನಿಸಿದರು. ಅವರು ಮಧ್ಯೆ ಪ್ರವೇಶಿಸುವಷ್ಟರಲ್ಲಿ ಜಾರ್ಜ್ ಕುರಿಯನ್ ಒಪ್ಪಲಿಲ್ಲ. ಅಂಗಿ ಮತ್ತು ಇತರ ವಸ್ತ್ರ ಖರೀದಿಸಿದ್ದು, 1500 ರೂ. ಮೊತ್ತ ಪಾವತಿಸಿದರು. ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರು ತೈಕ್ಕಾಡ್‍ನ ಗಾಂಧಿ ಭವನಕ್ಕೆ ಭೇಟಿ ನೀಡಿದ್ದರು. ಖಾದಿ ಮೇಳದ ಮಂಟಪಕ್ಕೆ ಭೇಟಿ ನೀಡಿದ ಸಚಿವರು ಈ ವಸ್ತ್ರಗಳನ್ನು ಖರೀದಿಸಿ ಹಣವನ್ನೂ ಪಾವತಿಸಿದರು. 

ಜಾರ್ಜ್ ಕುರಿಯನ್ ಅವರು ‘ಒಂದು ಜೋಡಿ ಖಾದಿ ಉಡುಗೆಯನ್ನು ಖರೀದಿಸೋಣ’ ಎಂಬ ಅಭಿಯಾನವನ್ನು ಈ ಸಂದರ್ಭ ಉದ್ಘಾಟಿಸಿದರು. ವಿಶ್ವ ಚಿಂತನೆಗಳಲ್ಲಿ ಗಾಂಧಿ ತತ್ವವು ಅತ್ಯುತ್ತಮವಾಗಿದ್ದು, ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಈ ಚಿಂತನೆಗಳನ್ನು ವ್ಯಾಪಕವಾಗಿ ಹರಡುವ ಕಾರ್ಯವನ್ನು ಗಾಂಧಿವಾದಿ ಸಂಘಟನೆಗಳು ಕೈಗೊಳ್ಳಬೇಕು ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು. ಖಾದಿ ಗ್ರಾಮೋದ್ಯೋಗ ಉತ್ಪನ್ನಗಳ ಉತ್ತೇಜನವನ್ನು ಬಲಪಡಿಸಬೇಕು ಎಂದು ಹೇಳಿದರು.

ಗಾಂಧಿ ಜಯಂತಿ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ಎಂ. ಆರ್. ಹರಿಹರನ್ ನಾಯರ್ ಈ ಕಾಲಘಟ್ಟದ ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ಗಾಂಧೀವಾದದ ಮಹತ್ವದ ಬಗ್ಗೆ ನೆನಪಿಸಿದರು.  ಡಾ. ಜೇಕಬ್ ಪುಲಿಕನ್, ಅಡ್ವ. ಶರತ್ಚಂದ್ರ ಪ್ರಸಾದ್, ಜಿ. ಸದಾನಂದನ್, ಅಡ್ವ.ಎಸ್. ರಾಜಶೇಖರನ್ ನಾಯರ್, ಅಡ್ವ. ಬಿ. ಜಯಚಂದ್ರ, ಅಡ್ವ ಎಸ್. ಉದಯಕುಮಾರ್, ವಿ. ಕೆ.ಮೋಹನ್, ಡಾ. ಜಿ. ರಾಜೇಂದ್ರನ್ ಪಿಳ್ಳೈ ಮತ್ತು ಕೌನ್ಸಿಲರ್ ಮಾಧವದಾಸ್ ಭಾಗವಹಿಸಿದ್ದರು.

ಗಾಂಧಿ ಜಯಂತಿ ಮಾಸಾಚರಣೆ ಅಂಗವಾಗಿ ಒಂದು ತಿಂಗಳ ಕಾಲ ಖಾದಿ ವಸ್ತು ಪ್ರದರ್ಶನ ಮೇಳ, ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮೇಳ, ಗಾಂಧಿ ಪುಸ್ತಕ ಪ್ರದರ್ಶನ ಮೇಳ ಹಾಗೂ ಮಂಡಿ ಮ್ಯೂಸಿಯಂಗೆ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries