HEALTH TIPS

ಶ್ವೇತಭವನದ ಫೆಲೊ ಆಗಿ ಭಾರತ ಮೂಲದ ಇಬ್ಬರ ಆಯ್ಕೆ

Top Post Ad

Click to join Samarasasudhi Official Whatsapp Group

Qries

 ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕನ್ನರಾದ ಬೋಸ್ಟನ್‌ನ ನಿವಾಸಿ ಪದ್ಮಿನಿ ಪಿಳ್ಳೈ ಹಾಗೂ ನ್ಯೂಯಾರ್ಕ್‌ನ ನಳಿನಿ ಟಾಟಾ ಅವರನ್ನು 2024-25ನೇ ಸಾಲಿಗೆ ಶ್ವೇತಭವನದ ಫೆಲೊ ಆಗಿ ಆಯ್ಕೆ ಮಾಡಲಾಗಿದೆ.


ಅಸಾಧಾರಣ ಪ್ರತಿಭೆಯ 15 ಜನರನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಆಯ್ಕೆಯಾದವರು ಶ್ವೇತಭವನದ ಹಿರಿಯ ಅಧಿಕಾರಿಗಳು, ಸಂಪುಟ ಕಾರ್ಯದರ್ಶಿ ಹಾಗೂ ಅತ್ಯುನ್ನತ ಹುದ್ದೆಯಲ್ಲಿ ಇರುವವರ ಜತೆಗೂಡಿ ಕಾರ್ಯನಿರ್ವಹಿಸುವರು.

'ನಳಿನಿ ಅವರನ್ನು ಸಂಪುಟ ವ್ಯವಹಾರಗಳ ವಿಭಾಗ, ಪಿಳ್ಳೈ ಅವರನ್ನು ಸಾಮಾಜಿಕ ಭದ್ರತಾ ಆಡಳಿತ ವಿಭಾಗಕ್ಕೆ ನಿಯೋಜಿಸಲಾಗಿದೆ' ಎಂದು ಶ್ವೇತಭವನವು ಈ ಕುರಿತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries