ಕಾಸರಗೋಡು: ನೆಲ್ಲಿಕುಂಜೆಯ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ 2024 ಡಿಸೆಂಬರ್ ತಿಂಗಳ 5, 6 ಮತ್ತು 7 ಎಂಬೀ ದಿನಗಳಲ್ಲಿ ಜರಗಲಿರುವ ಷಷ್ಠಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅವರು ಬಿಡುಗಡೆಗೋಳಿಸಿದರು. ಈ ಸಂದರ್ಭದಲ್ಲಿ ಗಂಗಾಧರ ಕಡಪ್ಪುರ, ಗಣೇಶ್ ಪಾರಕಟ್ಟೆ, ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ, ಕಾರ್ಯದರ್ಶಿ ಮಹೇಶ್, ಕ್ಷೇತ್ರದ ಮುಖ್ಯ ಅರ್ಚಕ ಬಾಲಕೃಷ್ಣ, ಸಮಿತಿ ಕೋಶಾಧಿಕಾರಿ ಕೆ.ಉಮೇಶ್, ಸದಸ್ಯರುಗಳಾದ ಸಜೇಶ್, ರತೀಶ್, ಅರವಿಂದ, ರಮೇಶ, ಸುಬ್ರಹ್ಮಣ್ಯ, ಸುನಿಲ್ ಸಾಯಿ ಉಪಸ್ಥಿತರಿದ್ದರು.