ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿಯ ಒಂಬತ್ತನೇ ವಾರ್ಡ್ ಕೇಳುಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ.ಎಂ ಕುಞÂಕಣ್ಣನ್ ನಂಬಿಯಾರ್ ಅವರ ನಾಮಕರಣ ಮಾಡಿದ ರಸ್ತೆಯನ್ನು ಲೋಕಾರ್ಪಣೆಗೈಯಲಾಯಿತು. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ, ವಾರ್ಡ್ ಸದಸ್ಯೆ ಪ್ರಮೀಳಾ ಮಜಲ್ ರಸ್ತೆಯ ನಾಮಕರಣ ಫಲಕ ಅನಾವರಣಗೊಳಿಸಿದರು. ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪ್ರಭು, ಜಯಕುಮಾರ್, ಯೋಗೇಶ್, ರಾಜೇಶ್ ನಾಯ್ಕ್, ಕಮಲಾಕ್ಷನ್, ಗಿರೀಶ್, ಉದಯನ್, ಹರಿದಾಸ್, ಶಿವದಾಸ್, ಕರುಣಾಕರನ್ ಮೊದಲಾದವರು ಪಾಲ್ಗೊಂಡಿದ್ದರು.
ಗೋವಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ ಕುಞÂಕಣ್ಣನ್ ನಂಬ್ಯಾರ್ ಅವರು ಸ್ವಾತಂತ್ರ್ಯ ಸ್ವಾತಂತ್ರ್ಯಾನಂತರ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. 1986 ರಲ್ಲಿ ಗೌರವ ಕ್ಯಾಪ್ಟನ್ ಆಗಿ ನಿವೃತ್ತರಾದ ನಂತರ ಮದ್ಯ ನಿಷೇಧ ಸಮಿತಿ, ಕ್ಯಾನ್ ಫೆಡ್, ಪೀಪಲ್ಸ್ ಫೆÇೀರಂ. ಸಾಮಾಜಿಕ, ಸಾಂಸ್ಕøತಿಕ ವೇದಿಕೆ ಇತ್ಯಾದಿ ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ವಾತಂತ್ರ್ಯ ಹೋರಾಟದ ಯೋಧರಿಗಾಗಿರುವ ಮನ್ನಣೆ, ಗೌರವ ಕಭಿಸಿರುವ ಕ್ಯಾಪ್ಟನ್ ಕೆ.ಎಂ ಕುಞÂಕಣ್ಣನ್ ನಂಬ್ಯಾರ್ ಅವರ ಹೆಸರನ್ನು ರಸ್ತೆಗಿರಿಸಲಾಗಿದೆ.