ನವದೆಹಲಿ: ಆಸಿಯಾನ್ ಶೃಂಗಸಭೆಗಾಗಿ ಲಾವೋಸ್ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಭೇಟಿ ಮಾಡಿದ್ದಾರೆ.
ನವದೆಹಲಿ: ಆಸಿಯಾನ್ ಶೃಂಗಸಭೆಗಾಗಿ ಲಾವೋಸ್ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಭೇಟಿ ಮಾಡಿದ್ದಾರೆ.
ಲಾವೋಸ್‌ನ ವಿಯೆಂಟಿಯಾನ್‌ನಲ್ಲಿ ಗುರುವಾರ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಉಭಯ ನಾಯಕರು ಭೇಟಿಯಾಗಿದ್ದಾರೆ.
ಜಸ್ಟಿನ್ ಟ್ರುಡೊ ಅವರು ಈ ಸಭೆಯನ್ನು ಬಹಳ 'ಸಂಕ್ಷಿಪ್ತ ಮಾತುಕತೆ' ಎಂದು ಕರೆದಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ ಸುಮಾರು ಒಂದು ವರ್ಷದ ಬಳಿಕ ಲಾವೋಸ್‌ನಲ್ಲಿ ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮುಖಾಮುಖಿಯಾಗಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಹದಗೆಟ್ಟ ಬಾಂಧವ್ಯವನ್ನು ಪ್ರಸ್ತಾಪಿಸಿರುವ ಟ್ರುಡೊ, 'ನಾವು ಮಾಡಬೇಕಾದ ಕೆಲಸಗಳ ಕುರಿತು ಮೋದಿಯ ಅವರೊಂದಿಗೆ ಮಾತನಾಡಿದ್ದೇನೆ' ಎಂದಿದ್ದಾರೆ.