ಕಾಸರಗೋಡು: ಜಿಲ್ಲಾ ಶುಚಿತ್ವ ಮಿಷನ್ ಕಾಸರಗೋಡು, ಸ್ವಚ್ಛತಾ ಹಿ ಸೇವಾ ಮತ್ತು ಕಸ ಮುಕ್ತ ನವಕೇರಳ ಅಭಿಯಾನದ ಅಂಗವಾಗಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಜಿಲ್ಲಾ ಮಟ್ಟದ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಡಿಪಿಸಿ ಸಭಾಂಗಣದಲ್ಲಿ ಜರುಗಿತು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಕಾರ್ಯಾಗಾರ ಉದ್ಘಾಟಿಸಿದರು. ನೀಲೇಶ್ವರ ನಗರಸಭಾ ಅಧ್ಯಕ್ಷೆ ಶಾಂತಾ ಟಿ.ವಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸಹಾಯಕ ನಿರ್ದೇಶಕ ಸುಭಾಷ್ ಟಿ.ವಿ ಉಪಸ್ಥಿತರಿದ್ದರು. ನಂತರ ದ್ರವ ತ್ಯಾಜ್ಯ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ಸ್ಯಾನಿಟರಿ ನ್ಯಾಪ್ಕಿನ್ ನಿರ್ವಹಣೆ, ಯೋಜನಾ ನಿಧಿ ಮಾಹಿತಿ, ಕಾನೂನು ವಿಧಾನಗಳು, ತ್ಯಾಜ್ಯ ಮುಕ್ತ ನವ ಕೇರಳ ಕುರಿತು ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಕಸ ಮುಕ್ತ ನವಕೇರಳದ ಸಹ ಸಂಯೋಜಕ ಕೃಷ್ಣ ಎಚ್ ಸ್ವಾಗತಿಸಿದರು.