ಕಾಸರಗೋಡು: ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಹತ್ತರ ಹರೆಯದ ಬಾಲಕನಿಗೆ ಹರ್ನಿಯಾ ಶಸಸ್ತ್ರಚಿಕಿತ್ಸೆ ಸಂದರ್ಭ ಹೃದಯಕ್ಕೆ ಸಂಬಂಧಿಸಿದ ನರಕ್ಕೆ ಹಾನಿಯುಂಟಾಗಿರುವ ಬಗ್ಗೆ ಹೆತ್ತವರು ನೀಡಿದ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಾನವಹಕ್ಕು ಆಯೋಗ ನಿರ್ದೇಶಿಸಿದೆ. ಕಾಸರಗೋಡಿನಲ್ಲಿ ನಡೆದ ಮಾನವಹಕ್ಕು ಆಯೋಗ ಸಿಟ್ಟಿಂಗ್‍ನಲ್ಲಿ ಲಭಿಸಿದ ದೂರಿನ ಮೇರೆಗೆ ಈ ನಿರ್ದೇಶ ನೀಡಲಾಗಿದೆ. 1ದಿವಸದೊಳಗೆ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಪ್ರಕರಣದ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಎ.ವಿ ರಾಮದಾಸ್ ತನಿಖೆ ಆರಂಭಿಸಿದ್ದಾರೆ.
ಅಶೋಕನ್-ಕಾತ್ರ್ಯಾಯಿನಿ ದಂಪತಿ ಹತ್ತರ ಹರೆಯದ ಪುತ್ರನಿಗೆ ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಸೆ. 18ರಂದು ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ನಂತರ ಬಾಲಕನನ್ನು ಉನ್ನತ ಚಿಕಿತ್ಸೆಗಾಗಿ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆಯಲ್ಲಿ ಲೋಪವುಂಟಾಘಿರುವ ಬಗ್ಗೆ ಸಮಗ್ರ ತನಿಖೆ ನಡೆಸಲು ತಜ್ಞ ವೈದ್ಯರಿಗೆ ಡಿಎಂಓ ಸೂಚಿಸಿದ್ದಾರೆ.