ಬದುಯಡ್ಕ: ಚತುರ್ಭಾಷಾ ವಿದ್ವಾಂಸ, ಸಾಹಿತಿ, ಸಂಶೋಧಕ ದಿ.ಡಾ.ಪುಂಡೂರು ವೆಂಕಟರಾಜ ಪುಣಿಂಚತ್ತಾಯರ 88ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸುವ ಸಲುವಾಗಿ ಬದಿಯಡ್ಕದ ಇರಾ ಸಭಾಭವನ ವಳಮಲೆಯಲ್ಲಿ ಇಂದು(ಅ.19) ಬೆಳಿಗ್ಗೆ 10 ಕ್ಕೆ ಸಮಾಲೋಚನಾ ಸಭೆಯೊಂದನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಚಾಲಕ ಅಖಿಲೇಶ್ ನಗುಮುಗಂ ಹಾಗೂ ಸಂಯೋಜಕ ವಿಜಯರಾಜ ಪುಣಿಚಿತ್ತಾಯ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.