HEALTH TIPS

ಆಯೋಗಕ್ಕೆ ಬಂದ ದೂರುಗಳಿಗೆ ಇಲಾಖೆಗಳು ಸೂಕ್ತ ಪರಿಹಾರ ನೀಡಬೇಕು: ಪರಿಶಿಷ್ಟ ಜಾತಿ-ಪಂಗಡಗಳ ಆಯೋಗ : ಅಧ್ಯಕ್ಷ:

ಕಾಸರಗೋಡು: ಕೇರಳ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್ ಮಾತನಾಡಿ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಆಯೋಗದ ಮುಂದೆ ಬರುವ ದೂರುಗಳ ಸಂಖ್ಯೆ ತೀರಾ ಕಡಿಮೆ, ಆದರೆ ಕಂದಾಯ ಮತ್ತು ಪೋಲೀಸ್ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚು ಎಂದು ತಿಳಿಸಿರುವರು.

ಅವರು ಕಾಸರಗೋಡು ನಗರ ಸಭಾ ಸಮ್ಮೇಳನ ಸಭಾಂಗಣದಲ್ಲಿ ಎರಡು ದಿನಗಳ ಕುಂದುಕೊರತೆ ನಿವಾರಣಾ ಅದಾಲತ್‍ನಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. 


ಕಳೆದ ಬಾರಿ 2022ರಲ್ಲಿ ಆಯೋಗದ ಅದಾಲತ್ ಕಾಸರಗೋಡು ಜಿಲ್ಲೆಯಲ್ಲಿ ನಡೆದಿತ್ತು. ಎರಡು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಮತ್ತೆ ಅದಾಲತ್ ನಡೆಸಲಾಗಿದೆ. ಕಂದಾಯ, ಪೋಲೀಸ್, ಸ್ಥಳೀಯಾಡಳಿತ  ಇಲಾಖೆ ಹೀಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಆಯೋಗ ಸ್ವೀಕರಿಸಿದೆ. ಆಯೋಗವು ಮಧ್ಯಪ್ರವೇಶಿಸಿರುವ ದೂರುಗಳ ಪರಿಹಾರವನ್ನು ಆಯಾ ಇಲಾಖೆಗಳಿಗೆ ಬಿಟ್ಟಿದ್ದು, ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಆಯೋಗದ ಅಧ್ಯಕ್ಷರು ತಿಳಿಸಿದರು.


ಕೇರಳ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಈ ವರ್ಷದ 7ನೇ ಕುಂದುಕೊರತೆ ನಿವಾರಣಾ ಅದಾಲತ್ ಕಾಸರಗೋಡು ನಗರಸಭೆ ಸಭಾಭವನದಲ್ಲಿ ನಿನ್ನೆ ಆರಂಭಗೊಂಡಿತು. ಎರಡು ದಿನಗಳ ಅದಾಲತ್‍ನಲ್ಲಿ 124 ದೂರುಗಳನ್ನು ಪರಿಗಣಿಸಲಾಗುವುದು. ಮೊದಲ ದಿನ 63 ದೂರುಗಳನ್ನು ಪರಿಗಣಿಸಲಾಗಿದೆ. ಎರಡನೇ ದಿನ 61 ದೂರುಗಳನ್ನು ಪರಿಗಣಿಸಲಾಗುವುದು. ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್, ಸದಸ್ಯರಾದ ಅಡ್ವ. ಸೇತು ನಾರಾಯಣನ್ ಮತ್ತು ಟಿ.ಕೆ.ವಾಸು ದೂರುಗಳನ್ನು ಆಲಿಸಿ ಅಗತ್ಯ ಕ್ರಮಕ್ಕೆ ಸೂಚಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಆಯೋಗದ ಮುಂದೆ ಸಲ್ಲಿಸಲಾದ ದೂರುಗಳು ಮತ್ತು ಬಾಕಿ ಉಳಿದಿರುವ ಅರ್ಜಿಗಳನ್ನು ದೂರುದಾರರು ಮತ್ತು ಪ್ರತಿಕಕ್ಷಿ ಆಲಿಸಿದ ನಂತರ ಹೊಸ ದೂರುಗಳನ್ನು ಸ್ವೀಕರಿಸಲು ಸೌಲಭ್ಯವನ್ನು ಒದಗಿಸಲಾಗಿದೆ.

ಜಿಲ್ಲಾಧಿಕಾರಿ ಕೆ.ಇಂನ್ಭಾಶೇಖರ್, ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಪೋಲೀಸ್, ಕಂದಾಯ, ಅರಣ್ಯ, ಶಿಕ್ಷಣ, ಪಂಚಾಯತ್, ಆರೋಗ್ಯ, ಸಹಕಾರ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕುಂದುಕೊರತೆ ನಿವಾರಣಾ ಅದಾಲತ್‍ನಲ್ಲಿ ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries