HEALTH TIPS

ಕಳೆದ ಲೋಕಸಭಾ ಚುನಾವಣಾ ಕರ್ತವ್ಯ ನಿರ್ವಹಿಸಿದ ಛಾಯಾಗ್ರಾಹಕರಿಗೆ ಲಭಿಸದ ವೇತನ: ಎಕೆಪಿಎ ಸಂಘಟನೆಯಿಂದ ಕಲೆಕ್ಟ್ರೇಟ್‍ನ ಮುಂಭಾಗ ಪ್ರತಿಭಟನೆ

ಕಾಸರಗೋಡು: ಯಾವುದೇ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುವಲ್ಲಿ ಛಾಯಾಗ್ರಾಹಕರ ಪಾತ್ರವಿದೆ. ರಾತ್ರಿ ಹಗಲೆನ್ನದೆ ಅಧಿಕಾರಿಗಳೊಂದಿಗೆ ಅಲೆಯುತ್ತಾ ನಿದ್ದೆಯನ್ನು ಬಿಟ್ಟು ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವಲ್ಲಿ ಸಹಕರಿಸಿದ ಛಾಯಾಗ್ರಾಹಕರಿಗೆ ವೇತನವನ್ನು ನೀಡದೆ ಅವರನ್ನು ಸತಾಯಿಸುತ್ತಿರುವುದು ಖಂಡನೀಯ. ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಛಾಯಾಗ್ರಾಹಕರ ಬೇಡಿಕೆಯನ್ನು ಈಡೇರಿಸಬೇಕು ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು.

ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶನಿವಾರ ಕಾಸರಗೋಡು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಜರಗಿದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯ ವೇಳೆ ಒಟ್ಟು 1600 ಕಡೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿ ಸುಮಾರು 45 ಲಕ್ಷ ರೂಪಾಯಿ ಮೊತ್ತವನ್ನು ಸದಸ್ಯರಿಗೆ ಸರ್ಕಾರವು ನೀಡಬೇಕಿತ್ತು. ನೂರಾರು ಕಾರಣಗಳನ್ನು ಮುಂದಿಟ್ಟು ಛಾಯಾಗ್ರಾಹಕರಿಗೆ ನ್ಯಾಯವಾಗಿ ಲಭಿಸಬೇಕಾದ ಮೊತ್ತವನ್ನು ಸರ್ಕಾರವು ತಡೆಹಿಡಿದಿದೆ. ಎಲ್ಲಾ ದಾಖಲೆಗಳನ್ನು ಸರಿಯಾಗಿ ನೀಡಿದ್ದರೂ ಹಣಮಂಜೂರು ಮಾಡದಿರುವ ನಿಲುವನ್ನು ಪ್ರತಿಭಟಿಸಿ ಎಕೆಪಿಎ ಸಂಘಟನೆ ಪ್ರತಿಭÀಟನೆಯನ್ನು ನಡೆಸಿದೆ.

ಎಕೆಪಿಎ ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಅಧ್ಯಕ್ಷತೆ ವಹಿಸಿ ಮಾತನಾಡಿ ಚುನಾವಣೆ ಘೋಷಣೆಯಾದ ನಂತರ ಅಧಿಕಾರಿಗಳೊಂದಿಗೆ ಒಪ್ಪಿಗೆ ಪತ್ರವನ್ನು ನೀಡಿ ನಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳ ಕರೆಗೆ ಓಗೊಟ್ಟು ಛಾಯಾಗ್ರಾಹಕರು ಸ್ಪಂದಿಸಿದ್ದಾರೆ. ಆದರೆ ಅವರಿಗೆ ನ್ಯಾಯವಾಗಿ ನೀಡಬೇಕಾದ ವೇತನವನ್ನು ನೀಡದೇ ಸತಾಯಿಸುತ್ತಿರುವುದನ್ನು ಪ್ರತಿಭಟಿಸುತ್ತಿದ್ದೇವೆ ಎಂದರು. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ಜಿಲ್ಲಾಕಾರ್ಯದರ್ಶಿ ಸುಗುಣನ್, ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಕೆ.ವಿ., ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ., ಜಿಲ್ಲಾ ಉಪಾಧ್ಯಕ್ಷ ಶರೀಫ್, ವೇಣು ವಿ.ವಿ., ಜೊತೆಕಾರ್ಯದರ್ಶಿ ಪ್ರಜಿತ್, ಅಶೋಕನ್ ಪಿ.ಕೆ., ಕಾಸರಗೋಡು ವಲಯ ಅಧ್ಯಕ್ಷ ವಾಸು ಎ, ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ, ಕಾಞಂಗಾಡು ವಲಯ ಕಾರ್ಯದರ್ಶಿ ಪ್ರಜೀಶ್, ರಾಜಪುರಂ ವಲಯ ಕಾರ್ಯದರ್ಶಿ ರಾಜೀವನ್ ಪಿ, ನೀಲೇಶ್ವರಂ ವಲಯ ಕಾರ್ಯದರ್ಶಿ ಪ್ರಭಾಕರ ಮಾತನಾಡಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ರಾಜೇಂದ್ರನ್ ಸ್ವಾಗತಿಸಿ, ಜಿಲ್ಲಾ ಪಿಆರ್ ಒ ಅನೂಪ್ ಚಂದೇರ ವಂದಿಸಿದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries