ಕಾಸರಗೋಡು : ನಗರದ ಪೇಟೆ ಶ್ರೀ ವೆಂಕಟರಮಣ ಕ್ಷೇತ್ರದ ವ್ಯಾಸ ಮಂಟಪದಲ್ಲಿ ಶ್ರೀ ವೆಂಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಸಪ್ತಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಭಾಸ್ಕರ ಮಲ್ಲ ಅವರನ್ನು ಅಧ್ಯಯನ ಕೇಂದ್ರದ ವತಿಯಿಂದ "ಯಕ್ಷೋತ್ಸವ ಪ್ರಶಸ್ತಿ" ನೀಡಿ ಗೌರವಿಸಲಾಯಿತು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಭಾಸ್ಕರ ಮಲ್ಲ ಅವರನ್ನು ಸನ್ಮಾನಿಸಿದರು. ಡಾ. ಜನಾರ್ದನ ನಾಯ್ಕ್, ಕೃಷ್ಣ ಮನ್ನಿಪ್ಪಾಡಿ, ಲವ ಮೀಪುಗುರಿ, ಅಧ್ಯಯನ ಕೇಂದ್ರದ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ ಉಪಸ್ಥಿತರಿದ್ದರು. ಸವಿತಾ ಕಿಶೋರ್ ಸನ್ಮಾನ ಪತ್ರ ವಾಚಿಸಿದರು. ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.