ಕಾಸರಗೋಡು: ಜಿಲ್ಲಾಮಟ್ಟದ ಪಟ್ಟಾ ಮೇಳದಲ್ಲಿ ವಿಕಲಚೇತನ ರಾಜೇಶ್ ಹಾಗೂ ತಮಿಳ್ನಾಡಿನಿಂದ ಆಗಮಿಸಿ ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿದ್ದ ಜ್ಯೋತಿ ಅವರಿಗೆ ಹಕ್ಕುಪತ್ರ ವಿತರಿಸಿದ ಸಚಿವ ಕೆ. ರಾಜನ್ ಇಬ್ಬರ ಅಳಲನ್ನೂ ಕೇಳಿಸಿಕೊಳ್ಳುವುದರ ಜತೆಗೆ ಆತ್ಮೀಯವಾಗಿ ಮಾತನಾಡಿಸಿದರು.
ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದ ಕುಂಬ್ಡಾಜೆ ಗ್ರಾಮದ 39ರ ಹರೆಯದ ರಾಜೇಶ್ ಗಾಲಿಕುರ್ಚಿಯಲ್ಲಿ ವೇದಿಕೆ ಸನಿಹ ಆಗಮಿಸುತ್ತಿದ್ದಂತೆ ಸ್ವತ: ಸಚಿವರು ವೇದಿಕೆಯಿಂದ ಕೆಳಗಿಳಿದು ಅವರ ಜಾಗದ ಹಕ್ಕುಪತ್ರವನ್ನು ಹಸ್ತಾಂತರಿಸಿದರು. ಹಕ್ಕುಪತ್ರ ಕೈಗಿತ್ತು ಸಂತೋಷವಾಯಿತೇ ಎಂಬ ಸಚಿವರ ಪ್ರಶ್ನೆಗೆ ರಾಜೇಶ್ ನಗುವಿನ ಮೂಲಕವೇ ಕೃತಜ್ಞತೆ ಸಲ್ಲಿಸಿದರು. ಲಾಟರಿ ಏಜೆಂಟ್ ಆಗಿದ್ದು, ಪ್ರಸಕ್ತ ಕೂಡ್ಲುವಿನಲ್ಲಿರುವ ಕ್ವಾರ್ಟರ್ಸ್‍ನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿರುವ ರಾಜೇಶ್, ಸ್ವಂತ ಹೆಸರಿಗೆ ಭೂಮಿ ಮಂಜೂರಾಗಿ ಲಭಿಸಿರುವುದರಿಂದ ಖುಸಿಗೊಂಡಿದ್ದರು. ಲೈಫ್ ಯೋಜನೆಯನ್ವಯ ಮನೆ ನಿರ್ಮಣಕ್ಕೆ ಅರ್ಜಿ ಸಲ್ಲಿಸುವುದಾಗಿ ರಆಜೇಶ್ ತಿಳಿಸಿದ್ದಾರೆ.
ಇನ್ನು ಜ್ಯೋತಿ ಅವರ ಕುಟುಂಬದ ಹಿರಿಯರು ತಮಿಳ್ನಾಡಿನ ತಿರುನಲ್ವೇಲಿಯಿಂದ 75ವರ್ಷಗಳ ಹಿಂದೆ ಕೇರಳದ ಪತ್ತನಂತಿಟ್ಟಕ್ಕೆ ಬಂದು ನೆಲೆಸಿದ್ದು, ಸ್ವಂತ ಜಾಗ ಹಾಗೂ ಇದಕ್ಕೆ ಹಕ್ಕುಪತ್ರ ಲಭಿಸಿದ ಖುಷಿಯನ್ನು ಹಂಚಿಕೊಂಡರು. ಪತ್ತನಂತಿಟ್ಟದಿಂದ ಕಾಸರಗೋಡು ಕಾಞÂರಪೋಯಿಗೆ ಆಗಮಿಸಿದ್ದ ಜ್ಯೋತಿ ಲಾಟರಿ ಮಾರಾಟ ಮಾಡಿಕೊಮಡು ಜೀವನ ಸಾಗಿಸುತ್ತಿದ್ದಾರೆ. ಜ್ಯೋತಿ ಅವರಿಗೆ ವಿದ್ಯಾರ್ಥಿಗಳಾದ ಇಬ್ಬರು ಮಕ್ಕಳಿದ್ದಾರೆ. ತಾಯಿ ಚೆಲ್ಲಮ್ಮ ಜತೆ ವಾಸಿಸುತ್ತಿದ್ದ ಜ್ಯೋತಿ ಅವರಿಗೆ ಜಾಗ ಹಾಗೂ ಇದರ ಹಕ್ಕು ಪತ್ರ ಲಭಿಸಿದ್ದು, ಲೈಫ್ ಯೋಜನೆಯನ್ವಯ ಮನೆ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.