ಬದಿಯಡ್ಕ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ನವೀಕರಣದ ಅಂಗವಾಗಿ ಸಮಾಜ ಪ್ರತಿನಿಧಿಗಳ ಸಂಗಮ ನಡೆಯಿತು. ಕ್ಷೇತ್ರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕ್ಷೇತ್ರ ತಂತ್ರಿವರ್ಯ ಅಶೋಕ ಅಲೆವೂರಾಯ, ಕ್ಷೇತ್ರ ಮೊಕ್ತೇಸರ ರಾಖಲ್ ಅಡ್ಯಂತಾಯ, ಹಿರಿಯ ಆಚಾರ ಸ್ಥಾನಿಕರಾದ ಅಂಬಾಡಿ ಕಾರ್ನವರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಆಡಳಿತ ಸಮಿತಿ ಅಧ್ಯಕ್ಷ ವಸಂತನ್ ಚೇಂಬೋಡು ಅಧ್ಯಕ್ಷತೆ ವಹಿಸಿದ್ದರು. ಸಂಜೀವ ಶೆಟ್ಟಿ ಮೊಟ್ಟಂಕಂಜೆ ಅವರು ಉದ್ಘಾಟಿಸಿ ಮಾತನಾಡಿದರು. ಶ್ಯಾಂ ಭಟ್ ಏತಡ್ಕ, ಗಂಗಾಧರ ಬಲ್ಲಾಳ್ ಅಡ್ವಳಬೀಡು, ಹರಿನಾರಾಯಣ ಮಾಸ್ತರ್ ಶಿರಂತಡ್ಕ, ಡಾ.ವೇಣುಗೋಪಾಲ್ ಕಳಯತ್ತೋಡಿ, ಭರತ್ ಶೆಟ್ಟಿ ನೆಕ್ರಾಜೆ, ನ್ಯಾಯವಾದಿ ರಾಂಪ್ರಸಾದ್ ಶೆಟ್ಟಿ ಬೇರಿಕೆ, ಜ್ಞಾನದೇವ ಶೆಣೈ ಬದಿಯಡ್ಕ, ಎಸ್.ಎನ್.ಮಯ್ಯ, ಹರೀಶ್ ಗೋಸಾಡ, ರವೀಂದ್ರ ರೈ ಗೋಸಾಡ, ನರೇಂದ್ರ ಬಿ.ಎನ್, ಸತೀಶ್ ಮಾಸ್ತರ್, ಸುವರ್ಣ ಮಾಸ್ತರ್ ಅಗಲ್ಪಾಡಿ, ರಾಜಗೋಪಾಲ್ ನವಕಾನ, ಆನಂದ ಕೆ.ಮವ್ವಾರು, ರಾಜೇಶ್ ಮಾಸ್ತರ್ ಅಗಲ್ಪಾಡಿ, ಜಯರಾಮ ನೆಲ್ಲಿಕಳೆಯ, ನಾರಾಯಣನ್ ನಾಯರ್, ಕುಞರಾಮನ್ ನೆಕ್ರಾಜೆ, ಸುರೇಂದ್ರ ಪಣಿಕ್ಕರ್, ರಾಮ ಮಾಚಾವು, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಸಹಿತ ಹಲವು ಗಣ್ಯರು ಭಾಗವಹಿಸಿ ಮಾತನಾಡಿ, ಸಲಹೆ ಸೂಚನೆ ನೀಡಿದರು.
ಡಾ.ಶ್ರೀಧರ ಏತಡ್ಕ ಸ್ವಾಗತಿಸಿ, ವಿಶ್ವನಾಥ ಬಳ್ಳಪದವು ನಿರ್ವಹಿಸಿದರು. ರಾಘವನ್ ಕನಕತ್ತೋಡಿ ವಂದಿಸಿದರು. ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ವಿವಿದ ಸಮಿತಿ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.