ಕುಂಬಳೆ: ನಾಳೆ(ಅ. 22) ಸಂಜೆ 6 ಗಂಟೆಗೆ ತಿರುವನಂತಪುರಂನ ನಿಶಾಗಂಧಿ ಆಡಿಟೋರಿಯಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ಮಟ್ಟದ ‘ನನ್ನ ಭೂಮಿ’ ಸಮಗ್ರ ವೆಬ್ ಪೋರ್ಟಲ್ ಅನ್ನು ಉದ್ಘಾಟಿಸಲಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಜಾರ್-ಉಳುವಾರ್ ಗ್ರಾಮದಲ್ಲಿ ಈ ವ್ಯವಸ್ಥೆಯ ಮೂಲಕ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದರೊಂದಿಗೆ ‘ಎಲ್ಲರಿಗೂ ಭೂಮಿ..ಎಲ್ಲಾ ಭೂಮಿ ಮತ್ತು ಎಲ್ಲಾ ಸೇವೆಗಳಿಗೆ ಡಿಜಿ ದಾಖಲೆ.. ಸಾಕಾರ, ಡಿಜಿಟಲ್ ಸಮೀಕ್ಷೆ’ ಪೂರ್ಣಗೊಂಡ ಮೊದಲ ಗ್ರಾಮವಾಗಲಿದೆ. ಭೂಮಿಗೆ ಸಂಬಂಧಿಸಿದ ಸಮೀಕ್ಷೆ, ಕಂದಾಯ ಮತ್ತು ನೋಂದಣಿ ಸೇವೆಗಳು ಪೋರ್ಟಲ್ ಮೂಲಕ ಲಭ್ಯವಿರಲಿದೆ. ದೇಶದಲ್ಲೇ ಪ್ರಥಮ ಬಾರಿಗೆ ಈ ವ್ಯವಸ್ಥೆ ಜಾರಿಯಾಗುತ್ತಿದೆ. ಕುಂಬಳೆ ಗ್ರಾಮ ಪಂಚಾಯತಿಯ ಉಜಾರ್-ಉಳುವಾರ್ ಗ್ರಾಮವು ವ್ಯವಸ್ಥೆಯನ್ನು ಪೂರ್ಣಗೊಳಿಸುವಲ್ಲಿ ಮೊದಲ ಸ್ಥಾನದಲ್ಲಿದ್ದು, ಇದಕ್ಕಾಗಿ ಆಯ್ಕೆಯಾಗಿದೆ.
ಮೊದಲ ಹಂತದ ಡಿಜಿಟಲ್ ಸಮೀಕ್ಷೆ ಪೂರ್ಣಗೊಂಡಿರುವ ರಾಜ್ಯದ 200 ಗ್ರಾಮಗಳಲ್ಲಿ ಮುಂದಿನ ತಿಂಗಳುಗಳಲ್ಲಿ ಈ ಸೇವೆಯನ್ನು ಜಾರಿಗೊಳಿಸಲಾಗುವುದು.
ಉದ್ಘಾಟನಾ ಸಮಾರಂಭದಲ್ಲಿ ಕಂದಾಯ ಸರ್ವೇ ವಸತಿ ಇಲಾಖೆ ಸಚಿವ ಕೆ.ರಾಜನ್, ನೋಂದಣಿ ಇಲಾಖೆ ಸಚಿವ ರಾಮಚಂದ್ರನ್ ಕಾಡನಪಳ್ಳಿ ಸಹಿತ ವಿವಿಧ ಸಚಿವರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು, ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಚಾಲ್ತಿಯಲ್ಲಿರುವ ಯೋಜನೆಯ ಮೂಲಕ, ಮೂರು ಇಲಾಖೆಗಳಲ್ಲಿ ವಿವಿಧ ಸೇವೆಗಳು ಏಕೀಕೃತ ಪೋರ್ಟಲ್ 'ಎಂಡೆ ಭೂಮಿ'(ನನ್ನ ಭೂಮಿ) ಮೂಲಕ ಲಭ್ಯವಿರಲಿದೆ. ಪ್ರತಿಯೊಬ್ಬ ಭೂ ಮಾಲೀಕರು ಪ್ರಸ್ತುತ ಕಂದಾಯ ಇಲಾಖೆಯಲ್ಲಿನ ವ್ಯವಸ್ಥೆಯಲ್ಲಿ ಭ್ಯವಿರುವ ಭೂ ಪಾವತಿ, ಯೋಜನೆ ಇತ್ಯಾದಿಗಳನ್ನು ಪಡೆಯಬಹುದು, ನೋಂದಣಿ ಇಲಾಖೆಯಲ್ಲಿ ಪರ್ಲ್ ಸಿಸ್ಟಮ್ ಮೂಲಕ ಲಭ್ಯವಿರುವ ಭೂ ವರ್ಗಾವಣೆ ಮತ್ತು ಮಾರಾಟ ಸೇವೆಗಳು ಮತ್ತು ಸಮೀಕ್ಷೆಯ ಮೂಲಕ ಲಭ್ಯವಿರುವ ವಿವಿಧ ಯೋಜನೆಗಳು ಮತ್ತು ಹಳೆಯ ಕಂದಾಯ ದಾಖಲೆಗಳನ್ನು ಪಡೆಯಬಹುದು. ಈ ಪೋರ್ಟಲ್ ಮೂಲಕ ಇಲಾಖೆ ಏಕೀಕೃತಗೊಂಳ್ಳುತ್ತಿದೆ.