ತಿರುವನಂತಪುರಂ: ಪಾಲಕ್ಕಾಡ್ ಮತ್ತು ಚೇಲಕ್ಕರ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಸಿಪಿಎಂ ಘೋಷಿಸಿದ್ದು, ಕಾಂಗ್ರೆಸ್ ತೊರೆದಿರುವ ಪಿ.ಸರಿನ್ ಪಾಲಕ್ಕಾಡ್ ನಲ್ಲಿ ಎಡ ಅಭ್ಯರ್ಥಿಯಾಗಲಿದ್ದಾರೆ.
ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಮಾತನಾಡಿ, ಸಿಪಿಎಂ ಪಕ್ಷದ ಚಿಹ್ನೆಯ ಬದಲು ಸ್ವತಂತ್ರ ಚಿಹ್ನೆಯೊಂದಿಗೆ ಸ್ಪರ್ಧಿಸಲು ನಿರ್ಧರಿಸಿದೆ. ಚೇಲಕ್ಕರ ಉಪಚುನಾವಣೆಯಲ್ಲಿ ಯುಆರ್ ಪ್ರದೀಪ್ ಸಿಪಿಎಂ ಅಭ್ಯರ್ಥಿಯಾಗಲಿದ್ದಾರೆ. ಪ್ರದೀಪ್ ಚೇಲಕ್ಕರ ಕ್ಷೇತ್ರದ ಮಾಜಿ ಶಾಸಕ.
ಪಾಲಕ್ಕಾಡ್ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಹುಲ್ ಮಂಕೂಟ್ ಅವರನ್ನು ಅಭ್ಯರ್ಥಿ ಎಂದು ಕಾಂಗ್ರಸ್ಸ್ ಘೋಷಿಸಿದಾಗ ಡಾ ಸರಿನ್ ಎಡ ಪಾಳೆಯಕ್ಕೆ ಎರಡು ದಿನಗಳ ಹಿಂದೆಯಷ್ಟೇ ಪಕ್ಷಾಂತರಗೊಂಡಿದ್ದರು.