ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೀರ್ಚಾಲು ಸನಿಹದ ರತ್ನಗಿರಿ ಕುದ್ರೆಕ್ಕಾಳಿಯಮ್ಮ ಕ್ಷೇತ್ರ ಸೇರಿದಂತೆ ಎರಡು ಕಡೆ ನಡೆದ ಸರಣಿ ಕಳವಿನ ಆರೋಪಿ, ಮೆಣಸಿನಪಾರೆ ನಿವಾಸಿ ಸತೀಶ ಯಾನೆ ದೀಪಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದೇವಸ್ಥಾನಗಳಿಂದ ಕಳವುಗೈದ ಗಂಟೆ ಹಾಗೂ ದಈಪಗಳನ್ನು ಬದಿಯಡ್ಕದ ಗುಜರಿ ಅಂಗಡಿಯೊಂದಕ್ಕೆ ಮಾರಾಟ ಮಾಡುವ ಮಧ್ಯೆ ಆರೋಪಿಯನ್ನು ಬಂಧಿಸಲಾಗಿದೆ. ಗಂಟೆಯ ಬಗ್ಗೆ ಸಂಶಯಗೊಮಡ ಗುಜರಿಅಂಗಡಿ ಮಾಲಿಕ ತಕ್ಷಣ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಕುದ್ರೆಕ್ಕಾಳಿಯಮ್ಮ ಕ್ಷೇತ್ರ ಹಾಗೂ ವಿಷ್ಣುಮೂರ್ತಿ-ರಕ್ತಚಾಮುಂಡಿ ಕ್ಷೇತ್ರದ ಎದುರುಭಾಗ ನೇತುಹಾಕಲಾಗಿದ್ದ ಬೆಲೆಬಾಳುವ ತೂಗುದೀಪ ಹಾಗೂ ಘಂಟೆಗಳನ್ನು ಕಳವುಗೈದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.