ಬದಿಯಡ್ಕ: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಬದಿಯಡ್ಕ ಘಟಕದ ನೇತೃತ್ವದಲ್ಲಿ ಬದಿಯಡ್ಕ ಬಸ್ಸುತಂಗುದಾಣ ಹಾಗೂ ಪರಿಸರ ಪ್ರದೇಶಗಳನ್ನು ಬುಧವಾರ ಸ್ವಚ್ಛಗೊಳಿಸಲಾಯಿತು. ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ಬದಿಯಡ್ಕ ಘಟಕ ಅಧ್ಯಕ್ಷ ಬಾಲಕೃಷ್ಣ ನೀರ್ಚಾಲು, ಕಾರ್ಯದರ್ಶಿ ನಾರಾಯಣ ಓಡಂಗಲ್ಲು ನೇತೃತ್ವ ವಹಿಸಿದ್ದರು.
ಬೆಳಗಿನ ಜಾವ ತಂಗುದಾಣದ ಪರಿಸರದಲ್ಲಿ ಬಿದ್ದುಕೊಂಡಿದ್ದ ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಸಂಗ್ರಹಿಸಲಾಯಿತು. ಹಿರಿಯ ಛಾಯಾಗ್ರಾಹಕ ಬಾಲಸುಬ್ರಹ್ಮಣ್ಯ ಬೊಳುಂಬು, ಬದಿಯಡ್ಕ ಘಟಕ ನಿಕಟಪೂರ್ವ ಅಧ್ಯಕ್ಷ ಶ್ಯಾಮಪ್ರಸಾದ ಸರಳಿ, ಇಂಧುಶೇಖರ ವಾಂತಿಚ್ಚಾಲು, ಉದಯಕುಮಾರ್ ಮೈಕುರಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶುಚಿತ್ವಕಾರ್ಯಕ್ಕೆ ಪತ್ರಿಕಾ ವಿತರಕ ಬಾಲಕೃಷ್ಣ ಪೊಯ್ಯಕ್ಕಂಡ ಜೊತೆಗೂಡಿದರು.