ಕೊಲಂಬೊ: 2019ರ ಈಸ್ಟರ್ ಭಾನುವಾರ ದಿನದ ಭಯೋತ್ಪಾದಕ ದಾಳಿ, 2005ರಲ್ಲಿ ನಡೆದಿದ್ದ ತಮಿಳು ಪತ್ರಕರ್ತನ ಹತ್ಯೆ ಸೇರಿದಂತೆ ಪ್ರಮುಖ ಪ್ರಕರಣಗಳ ಮರುತನಿಖೆ ನಡೆಸುವಂತೆ ಶ್ರೀಲಂಕಾದ ನೂತನ ಸರ್ಕಾರ ಆದೇಶಿಸಿದೆ.
ಕೊಲಂಬೊ: 2019ರ ಈಸ್ಟರ್ ಭಾನುವಾರ ದಿನದ ಭಯೋತ್ಪಾದಕ ದಾಳಿ, 2005ರಲ್ಲಿ ನಡೆದಿದ್ದ ತಮಿಳು ಪತ್ರಕರ್ತನ ಹತ್ಯೆ ಸೇರಿದಂತೆ ಪ್ರಮುಖ ಪ್ರಕರಣಗಳ ಮರುತನಿಖೆ ನಡೆಸುವಂತೆ ಶ್ರೀಲಂಕಾದ ನೂತನ ಸರ್ಕಾರ ಆದೇಶಿಸಿದೆ.
'ಕೆಲ ಪ್ರಮುಖ ಪ್ರಕರಣಗಳು ಇತ್ಯರ್ಥವಾಗದೇ ಇರುವುದಕ್ಕೆ ಎದುರಾಗಿರುವ ತೊಡಕುಗಳನ್ನು ಪತ್ತೆ ಹಚ್ಚಲು ಸಾರ್ವಜನಿಕ ಭದ್ರತಾ ಸಚಿವಾಲಯ ಮುಂದಾಗಿದೆ.
2015ರಲ್ಲಿ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಆಡಳಿತಾವಧಿಯಲ್ಲಿ ಸೆಂಟ್ರಲ್ ಬ್ಯಾಂಕ್ ಬಾಂಡ್ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಹಗರಣ, 2019ರಲ್ಲಿ 11 ಭಾರತೀಯರು ಸೇರಿದಂತೆ 270 ಜನರ ಸಾವಿಗೆ ಕಾರಣವಾದ ಈಸ್ಟರ್ ಭಾನುವಾರ ಭಯೋತ್ಪಾದಕ ದಾಳಿ ಪ್ರಕರಣಗಳ ಮರುತನಿಖೆಯೂ ನಡೆಯಲಿದೆ.
ಇದರೊಂದಿಗೆ, 2005ರಲ್ಲಿ ನಡೆದಿದ್ದ ತಮಿಳು ಅಲ್ಪಸಂಖ್ಯಾತ ಸಮುದಾಯದ ಪತ್ರಕರ್ತ ಡಿ.ಶಿವರಾಮ್ ಹತ್ಯೆ ಮತ್ತು 2006ರಲ್ಲಿ ನಡೆದಿದ್ದ ಈಸ್ಟರ್ನ್ ವಿಶ್ವವಿದ್ಯಾಲಯದ ಮುಖ್ಯಸ್ಥ, ತಮಿಳು ಸಮುದಾಯದ ವಕ್ತಿಯ ಅಪಹರಣ ಪ್ರಕರಣ, 2011ರಲ್ಲಿ ನಡೆದಿದ್ದ ಇಬ್ಬರು ರಾಜಕೀಯ ಮುಖಂಡರ ಅಪಹರಣ ಪ್ರಕರಣಗಳು ಮರುತನಿಖೆಗೆ ಒಳಪಡಲಿದೆ.