ಬೀಜಿಂಗ್: ಡಿವೋರ್ಸ್ ( Divorce ) ವಿಚಾರಣೆ ವೇಳೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊರ್ಟ್ ಹಾಲ್ನಿಂದ ಹೊತ್ತೊಯ್ದಿರುವ ಘಟನೆ ಚೀನಾದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ.
20 ವರ್ಷಗಳ ವಿವಾಹ ಸಂಬಂಧವನ್ನು ಮುರಿದುಕೊಳ್ಳುವ ಕೋರಿಕೆಯೊಂದಿಗೆ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕೌಟುಂಬಿಕ ಹಿಂಸೆಯ ಕಾರಣ ನೀಡಿ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ನ್ಯಾಯಾಲಯ ಮೊದಲ ಹಂತದಲ್ಲಿ ಅರ್ಜಿಯನ್ನು ತಿರಸ್ಕರಿಸಿತು. ಇಬ್ಬರ ನಡುವೆ ಆಳವಾದ ಭಾವನಾತ್ಮಕ ಸಂಬಂಧವಿತ್ತು ಎಂದು ಹೇಳಲಾಗಿದೆ. ಆದರೆ, ಪತ್ನಿ ಮತ್ತೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಈ ವೇಳೆ ಗಂಡ ತನ್ನದೇಯಾದ ಹೊಸ ಪ್ಲಾನ್ನೊಂದಿಗೆ ಕೋರ್ಟ್ಗೆ ಬಂದಿದ್ದ.
ಡಿವೋರ್ಸ್ ವಿಚಾರಣೆ ನಡೆಯುತ್ತಿರುವಾಗಲೇ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೊರಗೆ ಓಡಿದ್ದಾನೆ. ಪತ್ನಿ ಕಿರುಚಿದರೂ ಆಕೆಯನ್ನು ಬಿಡದೆ ಹೊತ್ತೊಯ್ದಿದ್ದಾನೆ. ನಂತರ ಅಧಿಕಾರಿಗಳು ಆತನನ್ನು ಹಿಡಿದು ಘಟನೆಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಅಲ್ಲದೆ, ಭವಿಷ್ಯದಲ್ಲಿ ಇಂತಹ ಘಟನೆ ಮತ್ತೆ ನಡೆಯುವುದಿಲ್ಲ ಎಂದು ಗ್ಯಾರಂಟಿ ನೀಡಲು ಹೇಳಿದರು.
ತನ್ನ ತಪ್ಪಿನ ಪರಿಣಾಮಗಳನ್ನು ಅರ್ಥಮಾಡಿಕೊಂಡ ವ್ಯಕ್ತಿ ಮುಚ್ಚಳಿಕೆ ಬರೆದುಕೊಟ್ಟು ನ್ಯಾಯಾಲಯದ ಮುಂದೆ ಕ್ಷಮೆಯಾಚಿಸಿದ್ದಾನೆ. ಇನ್ನೆಂದು ಈ ರೀತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾನೆಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಇತ್ತ ಮಹಿಳೆಯು ಮೂಲಕ ತನ್ನ ಗಂಡನಿಗೆ ಕೊನೆಯ ಅವಕಾಶವನ್ನು ನೀಡಲು ಒಪ್ಪಿಕೊಂಡಿದ್ದಾರೆ.
ಅಂಕಿಅಂಶಗಳ ಪ್ರಕಾರ ಚೀನಾದಲ್ಲಿ 30 ಪ್ರತಿಶತದಷ್ಟು ವಿವಾಹಿತ ಪುರುಷರು ಕೌಟುಂಬಿಕ ಹಿಂಸೆಗೆ ಬಲಿಯಾಗುತ್ತಾರೆ ಮತ್ತು 60 ಪ್ರತಿಶತ ಮಹಿಳೆಯರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವರದಿಯಾಗಿದೆ.