ಕಾಸರಗೋಡು : ನಗರದ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಸಪ್ತಮ ವಾರ್ಷಿಕೋತ್ಸವ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರಗಿತು. ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಉದ್ಘಾಟಿಸಿದರು. ಖ್ಯಾತ ವೈದ್ಯ ಡಾ. ಜನಾರ್ದನ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಯನ ಕೇಂದ್ರದ ನಾಟ್ಯಗುರು ರಾಕೇಶ್ ರೈ ಅಡ್ಕ, ಕೃಷ್ಣ ಮನ್ನಿಪ್ಪಾಡಿ, ಲವ ಮೀಪುಗುರಿ, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಅಧ್ಯಯನ ಕೇಂದ್ರದ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು ಕಿಶೋರ್ ಕುಮಾರ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ 'ಹರೇ ರಾಮ ಹರೇ ಕೃಷ್ಣ'ಯಕ್ಷಗಾನ ಬಯಲಾಟ ಜರುಗಿತು.