ಕಾಸರಗೋಡು: ಜಿಲ್ಲೆಯ ರೈಲು ಪ್ರಯಾಣಿಕರ ಸಮಸ್ಯೆ ಪರಿಹರಿಸುವುದರ ಜತೆಗೆ ಮೂಲ ಸೌಕರ್ಯ ಒದಗಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಮಹಿಳಾಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಎಂ.ಎಲ್ ಅಶ್ವನಿ ಮನವಿ ಮೂಲಕ ಆಗ್ರಹಿಸಿದ್ದಾರೆ.
ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿರುವ ಮಂಜೇಶ್ವರ ರೈಲು ನಿಲ್ದಾಣದ ಅಭಿವೃದ್ಧಿ, ಪರಶುರಾಮ್ ಎಕ್ಸ್‍ಪ್ರೆಸ್, ಕಣ್ಣೂರು-ಬೆಂಗಳೂರು ಎಕ್ಸ್‍ಪ್ರೆಸ್ ಮತ್ತು ತಿರುವನಂತಪುರಂ ಎಕ್ಸ್‍ಪ್ರೆಸ್‍ನಂತಹ ದೂರದ ರೈಲುಗಳಿಗಾಗಿ ಮಂಜೇಶ್ವರದಲ್ಲಿ ನಿಲುಗಡೆ, ಕಣ್ಣೂರು ಮತ್ತು ಮಂಗಳೂರು ನಡುವೆ ಪ್ರಯಾಣಿಕ ಯಾ ಮೆಮು ರೈಲುಗಳನ್ನು ಬೆಳಗ್ಗೆ 10.45, ಮಧ್ಯಾಹ್ನ 2.15 ಹಾಗೂ ಮಂಗಳೂರಿನಿಂದ ಕಣ್ಣೂರಿಗೆ ರಾತ್ರಿ ಹಿಂದಿರುಗುವ ರೀತಿಯಲ್ಲಿ ಸೇವೆ ಕಲ್ಪಿಸುವುದು, ಕಾಞಂಗಾಡ್‍ನಲ್ಲಿ ಅಂತ್ಯೋದಯ ರೈಲಿಗೆ ನಿಲುಗಡೆ, ಹಜರತ್ ನಿಜಾಮುದ್ದೀನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ್ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್‍ಗೆ ಕಾಞಂಗಾಡ್‍ನಲ್ಲಿ ನಿಲುಗಡೆಯನ್ನು ಮರುಸ್ಥಾಪಿಸುವುದು, ಹೆಚ್ಚುವರಿಯಾಗಿ, ಮಲಬಾರ್ ಎಕ್ಸ್‍ಪ್ರೆಸ್ ನಂತರ ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿ ನಿಯಮಿತ ರಾತ್ರಿ ರೈಲುಗಳ ಕೊರತೆಯನ್ನು ಪರಿಗಣಿಸಿ, ಅಸ್ತಿತ್ವದಲ್ಲಿರುವ ಮಂಗಳೂರು ಜಂಕ್ಷನ್-ಕೊಚುವೇಲಿ ವಿಶೇಷ ರೈಲನ್ನು ಶಾಶ್ವತ ಸೇವೆಯನ್ನಾಗಿ ಮಾಡಲು ಮನವಿ ಮೂಲಕ ಆಗ್ರಹಿಸಿದರು. ಸಚಿವರ ಭೇಟಿ ಸಂದರ್ಭ ಮಾಜಿ ಕೇಂದ್ರ ಸಚಿವ ವಿ.ಮುರಳೀಧರನ್ ಜತೆಗಿದ್ದರು.