ವಡೋದರ: ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಗುಜರಾತ್‌ನ ವಡೋದರದಲ್ಲಿ ಸಿ295 ಏರ್‌ಕ್ರಾಫ್ಟ್ ತಯಾರಿಸುವ ಟಾಟಾ ಏರ್‌ಬಸ್ ಕಾರ್ಖಾನೆಯನ್ನು ಉದ್ಘಾಟಿಸಿದರು. ಈ ಮೂಲಕ ಭಾರತ ಮತ್ತು ಸ್ಪೇನ್‌ನ ಸಹಭಾಗಿತ್ವವು ಹೊಸ ದಿಕ್ಕಿನಲ್ಲಿ ಸಾಗಿದೆ ಎಂದು ವರದಿ ತಿಳಿಸಿದೆ.

ಇದು ಮಿಲಿಟರಿ ಏರ್‌ಕ್ರಾಫ್ಟ್‌ಗಳನ್ನು ಉತ್ಪಾದಿಸುವ ದೇಶದ ಮೊದಲ ಖಾಸಗಿ ವಲಯದ ಕಾರ್ಖಾನೆಯಾಗಿದೆ.
ಈ ಯೋಜನೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ವೃದ್ಧಿಸುವುದು ಮಾತ್ರವಲ್ಲದೆ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ವರ್ಲ್ಡ್ ಮಿಶನ್‌ಗೆ ವೇಗ ನೀಡಿದೆ ಎಂದು ಮೋದಿ ಹೇಳಿದ್ದಾರೆ.
ಇದೇವೇಳೆ, ಇತ್ತೀಚೆಗೆ ನಿಧನರಾದ ರತನ್ ಟಾಟಾ ಅವರಿಗೆ ಗೌರವ ವಂದನೆ ಅರ್ಪಿಸಿದ ಮೋದಿ, ಏರ್‌ಬಸ್ ಮತ್ತು ಟಾಟಾ ಸಂಸ್ಥೆಗಳಿಗೆ ಶುಭಾಶಯ ತಿಳಿಸಿದ್ದಾರೆ.
ಏರ್‌ಬಸ್ ಸಿ295 ಒಂದು ಮಧ್ಯಮ ಗಾತ್ರದ ಸರಕು ಸಾಗಣೆಯ ಏರ್‌ಕ್ರಾಫ್ಟ್ ಆಗಿದ್ದು, ಸ್ಪ್ಯಾನಿಶ್‌ನ ಏರೋಸ್ಪೇಸ್ ಕಂಪನಿ ಸಿಎಎಸ್‌ಎ ಉತ್ಪಾದನೆ ಮಾಡುತ್ತಿತ್ತು. ಅದು ಈಗ ಯೂರೋಪ್‌ನ ಬಹುರಾಷ್ಟ್ರೀಯ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಡಿವಿಜನ್‌ನ ಭಾಗವಾಗಿದೆ.
ಸಿ295 ಏರ್‌ಬಸ್ ಅನ್ನು ವೈದ್ಯಕೀಯ ಸ್ಥಳಾಂತರ, ವಿಪತ್ತು ನಿರ್ವಹಣೆ, ನೌಕಾಪಡೆ ಗಸ್ತು ಮುಂತಾದ ಕೆಲಸಗಳಲ್ಲಿ ಬಳಸಲಾಗುತ್ತದೆ.
ಏರ್‌ಬಸ್ ಉತ್ಪಾದನಾ ಘಟಕ ಉದ್ಘಾಟನೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನವನ್ನು ಮೋದಿ-ಸಂಚೇಜ್ ವೀಕ್ಷಿಸಿದರು.
ಸಿ295 ಏರ್‌ಬಸ್ ಕಾರ್ಕಾನೆಯು ನವಭಾರತದ ಹೊಸ ರೀತಿಯ ಕೆಲಸದ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಅಕ್ಟೋಬರ್ 2022ರಲ್ಲಿ ಅಡಿಗಲ್ಲು ಹಾಕಲಾದ ಈ ಕಾರ್ಖಾನೆ ಈಗ ಉದ್ಘಾಟನೆಗೊಂಡಿರುವುದು ಭಾರತದಲ್ಲಿ ಯೋಜನೆಯ ವೇಗದ ಕಾರ್ಯಗತಕ್ಕೆ ಸಾಕ್ಷಿಯಾಗಿದೆ ಎಂದು ಮೋದಿ ಹೆಳಿದ್ದಾರೆ.