ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವಾಗ ಸಾಮಾನ್ಯವಾಗಿ ನಮಗೆ ತಿಳಿಯುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಮಧುಮೇಹದ ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ನಾವು ಆ ಲಕ್ಷಣಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವಾಗ ಸಾಮಾನ್ಯವಾಗಿ ನಮಗೆ ತಿಳಿಯುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಮಧುಮೇಹದ ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ನಾವು ಆ ಲಕ್ಷಣಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ.
ದಣಿದ ಭಾವನೆ:
8-9 ಗಂಟೆಗಳ ಕಾಲ ಮಲಗಿದ ನಂತರವೂ ಬೆಳಿಗ್ಗೆ ತುಂಬಾ ದಣಿವಾದ ಅನುಭವ ಆಗುತ್ತಿದ್ದರೆ ಅದು ಮಧುಮೇಹದ ಲಕ್ಷಣವಾಗಿರಬಹುದು. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುವುದರಿಂದ, ನರಗಳ ಒತ್ತಡ ಮತ್ತು ಆಯಾಸದಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.
ಕೈ ನಡುಕ :
ಸಕ್ಕರೆಯ ಮಟ್ಟವು ಹೆಚ್ಚಾದಾಗ ಅಥವಾ ಕಡಿಮೆಯಾದಾಗ, ದೇಹದಲ್ಲಿ ಹಲವಾರು ರೀತಿಯ ಪ್ರತಿಕ್ರಿಯೆಗಳು ನಡೆಯಲು ಪ್ರಾರಂಭಿಸುತ್ತವೆ. ಕೈ ಮತ್ತು ಕಾಲುಗಳಲ್ಲಿ ನಡುಕ ಮಧುಮೇಹದ ಪ್ರಮುಖ ಲಕ್ಷಣವಾಗಿದೆ.
ಬಾಯಿ ಒಣಗುವುದು :
ಮಧುಮೇಹದಲ್ಲಿ , ಪದೇ ಪದೇ ಬಾಯಾರಿಕೆಯಾಗುತ್ತದೆ.ಅನೇಕ ಬಾರಿ ರೋಗಿಯು ಬೆಳಿಗ್ಗೆ ಎದ್ದಾಗ, ನಿರ್ಜಲೀಕರಣದಿಂದಾಗಿ ಬಾಯಿ ಒಣಗುತ್ತದೆ. ನಿಮಗೂ ಹೀಗಾಗುತ್ತಿದ್ದರೆ ನಿರ್ಲಕ್ಷಿಸಬೇಡಿ.
ಗಂಟಲು ನೋವು :
ನಿರ್ಜಲೀಕರಣ ಮತ್ತು ಅತಿಯಾದ ಬಾಯಾರಿಕೆಯಿಂದಾಗಿ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಮಂದ ಅದೃಷ್ಟಿ :
ಮಧುಮೇಹದಲ್ಲಿ, ದೃಷ್ಟಿ ಮಸುಕಾಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಎದ್ದ ಕೂಡಲೇ ದೃಷ್ಟಿ ಮಂಜು ಮಂಜಾಗಲು ಆರಂಭಿಸುತ್ತದೆ. ಇದು ಗಂಭೀರವಾದ ರೋಗಲಕ್ಷಣವಾಗಿದ್ದು, ಇದನ್ನು ನಿರ್ಲಕ್ಷಿಸಬಾರದು.
(ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.)