ಸುಕ್ಮಾ: ಇಬ್ಬರು ನಕ್ಸಲೀರನ್ನು ಅರಣ್ಯದಿಂದ ಬಂಧಿಸಲಾಗಿದ್ದರೂ ಓರ್ವ ಮಹಿಳೆ ಸೇರಿದಂತೆ ಐವರು ನಕ್ಸಲೀಯರು ಛತ್ತೀಸ್ ಗಢದ ಬಸ್ತಾರ್ ವಲಯದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಿರಿಯ ನಕ್ಸಲ್ ಮುಖಂಡರಿಂದ ನಡೆಯುತ್ತಿರುವ ದೌರ್ಜನ್ಯ ಮತ್ತು ಅಮಾನವೀಯತೆ, ಪೊಳ್ಳು ನಕ್ಸಲ್ ಸಿದ್ದಾಂತದಿಂದ ಹತಾಶೆಗೊಂಡು ಶರಣಾಗತಿಯಾಗುತ್ತಿರುವುದಾಗಿ ಸೋಮವಾರ ಮಧ್ಯಾಹ್ನ ಸುಕ್ಮಾದಲ್ಲಿ ಹಿರಿಯ ಪೊಲೀಸ್ ಮತ್ತು ಸಿಆರ್ ಪಿಎಫ್ ಅಧಿಕಾರಿಗಳ ಮುಂದೆ ನಕ್ಸಲೀಯರು ಹೇಳಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಬಿಜಾಪುರ ಜಿಲ್ಲೆಯ ಬರ್ದೆಲಾ ಮತ್ತು ಬಾಡೆ ಗ್ರಾಮಗಳ ನಡುವಣ ಅರಣ್ಯದಿಂದ ಭಾನುವಾರ ಸಂಜೆ ಇಬ್ಬರು ನಕ್ಸಲೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ರಾಜ್ಯ ಸರ್ಕಾರದ ನಕ್ಸಲ್ ಪುರ್ನವಸತಿ ನೀತಿ ಮತ್ತು ದೂರದ ಹಳ್ಳಿಗಳಲ್ಲಿ ಅಭಿವೃದ್ದಿಗಾಗಿ ನಿಯಾದ್ ನೆಲ್ಲನಾರ್' ಯೋಜನೆಯಿಂದ ಪ್ರೇರಣೆಗೊಂಡು ಶರಣಾಗಿರುವುದಾಗಿ ನಕ್ಸಲೀಯರು ತಿಳಿಸಿದ್ದಾರೆ.
ಈ ನಕ್ಸಲೀಯರು ಪೊಲೀಸ್ ತಂಡಗಳ ಮೇಲೆ ದಾಳಿ, ಐಇಡಿ ಸ್ಫೋಟ, ರಸ್ತೆ ಹಾನಿ, ನಕ್ಸಲ್ ಪೋಸ್ಟರ್ ಮತ್ತು ಬ್ಯಾನರ್ ಅಳವಡಿಕೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.