ಪೆರ್ಲ: ನಲ್ಕ ಸಮೀಪದ ಶುಳುವಾಲಮೂಲೆ ಶ್ರೀಸದನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಕ್ಟೋಬರ್ 3 ರಿಂದ 12 ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಶಿವನಾರಾಯಣ ಭಟ್ಟರ ನೇತೃತ್ವದಲ್ಲಿ ನಡೆಯಲಿದೆ.ಪ್ರತಿನಿತ್ಯ ಮರ್ಧಯಾಹ್ನ 12 ಹಾಗೂ ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.ಅ.7 ರಂದು ಲಲಿತ ಪಂಚಮಿ ಪ್ರಯುಕ್ತಲಲಿತಾ ಸಹಸ್ರನಾಮ ಹವನ,ಶನಿ ಶಾಂತಿ ಹಾಗೂ ರಾತ್ರಿ ಆಶ್ಲೇಷ ಬಲಿ ನಡೆಯಲಿದೆ. ಅ.12 ರಂದು ಬೆಳಿಗ್ಗೆ 8 ಕ್ಕೆ ಚಂಡಿಕಾ ಹವನ ಆರಂಭ, 11.30ಕ್ಕೆ ಪೂರ್ಣಾಹುತಿ, ಆಯುಧಪೂಜೆ, 12.30ಕ್ಕೆ ಮಹಾಪೂಜೆ, ರಾತ್ರಿ 9.30 ರಿಂದ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕøತಿಒಕ ಕಾರ್ಯಕ್ರಮದಂಗವಾಗಿ ಅ.3 ರಂದು ಮುಳ್ಳೇರಿಯದ ಶ್ರೀಗಣೇಶ ಯಕ್ಷಗಾನ ಕಲಾಜಕೇಂದ್ರದವರಿಂದ ಸಂಜೆ 6.30 ರೊಂದ ಯಕ್ಷಗಾನ ಬಯಲಾಟ, 4 ರಂದು ಸಂಜೆ 6.30ರಿಂದ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಬಯಲಾಟ, ಅ.6 ರಂದು ಬೆಳಿಗ್ಗೆ 10 ರಿಂದ ಭಕ್ತಿ ಗಾನಾಮೃತ, ಸಂಜೆ 6.30 ರಿಂದ ಕುಂಟಾಲುಮೂಲೆ ತಂಡದಿಂದ ಯಕ್ಷಗಾನ ಬಯಲಾಟ, ಅ.7 ರಂದು ಸಂಜೆ 6.30 ರಿಂದ ಬದಿಯಡ್ಕದ ರಂಗಸಿರಿ ತಂಡದಿಂದ ಯಕ್ಷಗಾನ ಬಯಲಾಟ, ಅ.9 ರಂದು ಸಂಜೆ 6.30ರಿಂದ ಪೆರ್ಲ ಶ್ರೀಅಯ್ಯಪ್ಪಸ್ವಾಮಿ ಭಜನಾ ತಂಡದಿಂದ ಭಜನಾ ಸಂಕೀರ್ತನೆ,ಅ.10 ರಂದು ಸಂಜೆ 6.30ರಿಂದ ಕುರಿಯ ವಿಠಲಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನ ಉಜಿರೆ ತಂಡದಿಂದ ತಾಳಮದ್ದಳೆ ಕೂಟ ನಡೆಯಲಿದೆ.ಅ.12 ರಂದು ರಾತ್ರಿ 7 ರಿಂದ ಕಾರ್ತಿಕ ಶ್ಯಾಮ ಮುಂಡೋಳುಮೂಲೆ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ.