HEALTH TIPS

ಡ್ಯಾನ್ಸ್ ಶೋ ಮಾಡಲು ಸಿನಿಮಾ ಬಿಟ್ಟೆನಷ್ಟೇ ಹೊರತು ಅಮ್ಮಾದಿಂದ ಯಾವತ್ತೂ ಕೆಟ್ಟ ಅನುಭವ ಆಗಿಲ್ಲ: ಶಮ್ನಾ ಕಾಸಿಂ

ದುಬೈ: ಅಮ್ಮಾ ಸಂಘಟನೆಯಿಂದ ನನಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ ಎಂದು ನಟಿ ಶಮ್ನಾ ಕಾಸಿಂ ಹೇಳಿದ್ದಾರೆ. ಆದರೆ ಡ್ಯಾನ್ಸ್ ಶೋ ಮಾಡುವ ಕಾರಣಕ್ಕೆ ತಾನು ಮಲಯಾಳಂ ಚಿತ್ರರಂಗದಿಂದ ಹೊರಗಿರಬೇಕಾಯಿತೆಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ದುಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ನಟಿ, ಮಲಯಾಳಂ ಚಿತ್ರರಂಗದಲ್ಲಿ ಪ್ರಸ್ತುತ ವಿದ್ಯಮಾನಗಳು ಕೆಟ್ಟದಾಗಿದ್ದರೂ, ಎಲ್ಲವೂ ಮತ್ತೆ ಉತ್ತಮವಾಗಿ ಬದಲಾಗುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.

‘ಅಮ್ಮಾ ಸಂಘಟನೆಯಿಂದ ತನಗೆ ಯಾವತ್ತೂ ಕೆಟ್ಟ ಅನುಭವ ಆಗಿಲ್ಲ. ಇತ್ತೀಚೆಗಷ್ಟೇ ನಾನು  ಅಮ್ಮಾದ  ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆದರೆ ಕೆಲವು ತಿಂಗಳುಗಳ ಕಾಲ ಡ್ಯಾನ್ಸ್ ಶೋ ನೀಡಬೇಡಿ ಎಂದು ದೊಡ್ಡ ನಿರ್ದೇಶಕರೊಬ್ಬರು ಹೇಳಿದ್ದರು. ಒಳ್ಳೆಯ ಚಿತ್ರದಿಂದ ನನ್ನನ್ನು ದೂರವಿರಿಸಲಾಗಿದೆ. ಹಲವು ಡ್ಯಾನ್ಸ್ ಶೋಗಳನ್ನು ಮಾಡುತ್ತಿದ್ದೇನೆ ಎಂದು ಶಮ್ನಾ ಬಹಿರಂಗಪಡಿಸಿದ್ದಾರೆ.

ಆದರೆ ಅಂದು ಸಿನಿಮಾಗಳಿಗಾಗಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ್ದರೆ ಇಂದು ಡ್ಯಾನ್ಸ್ ಮತ್ತು ಸಿನಿಮಾ-ಎರಡೂ ಇರುತ್ತಿರಲಿಲ್ಲ ಎಂದು ನಟಿ ಶಮ್ನಾ ತಿಳಿಸಿದರು. "ತಾನು ಡ್ಯಾನ್ಸ್ ಕಲಾವಿದೆಯಾಗಿದ್ದು, ಅದರಮೇಲೆ ಸಿನಿಮಾದಲ್ಲಿ ಅವಕಾಶ ಲಭಿಸಿದಿದ್ದರೆ ಅದು ತನ್ನದೇ ಸಮಸ್ಯೆ. ಆದರೆ ಈಗ ಡ್ಯಾನ್ಸ್, ಆ್ಯಕ್ಟಿಂಗ್ ಎರಡೂ ಮಾಡುತ್ತಿದ್ದೇನೆ. ಮದುವೆಯ ನಂತರವೂ ವಿದೇಶಿ ಚಿತ್ರಗಳಿಗೆ ಅವಕಾಶಗಳು ಬರುತ್ತಿವೆ" ಎಮದರು.

ಅಂದರೆ ನಟನೆ ಮತ್ತು ನೃತ್ಯವನ್ನು ಒಟ್ಟಿಗೆ ತೆಗೆದುಕೊಳ್ಳಬಲ್ಲೆ ಎಂದಿದ್ದಾರೆ ಶಮ್ನಾ. ದುಬೈನಲ್ಲಿ ಹೊಸ ನೃತ್ಯ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಶಮ್ನಾ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries