ಕೋಲ್ಕತ್ತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಶರತ್ ಚಂದ್ರ ಬೋಸ್ ಅವರ ಪುತ್ರಿ ರೋಮಾ ರೇ (95) ಅವರು ದಕ್ಷಿಣ ಕೋಲ್ಕತ್ತದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ರೋಮಾ ಅವರು 1930ರಿಂದ ತಮ್ಮ ದೊಡ್ಡಪ್ಪ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೋರಾಟದ ಹಾದಿಯನ್ನು ನೋಡಿಕೊಂಡೇ ಬೆಳೆದವರು. 1938ರಲ್ಲಿ ನೇತಾಜಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ರೋಮಾ ಅವರೊಂದಿಗೆ ಇದ್ದರು.
ರೋಮಾ ಅವರು ವಿಯೆನ್ನಾದಲ್ಲಿ ನೆಲೆಸಿದ್ದರು. ಅದೇ ಸ್ಥಳದಲ್ಲಿ ನೇತಾಜಿ ಅವರ ಪತ್ನಿ ಎಮಿಲಿ ಶೆಂಕ್ಲ್ ಕೂಡಾ ಇದ್ದರು. ಇವರಿಬ್ಬರೂ ಅತ್ಯಂತ ಆಪ್ತರಾಗಿದ್ದರು. 1996ರಲ್ಲಿ ಶೆಂಕ್ಲ್ ಅವರ ನಿಧನರಾದಾಗ ಅವರ ಕುರಿತು ಮಾತನಾಡಲು ರೋಮಾ ಅವರನ್ನು ಜರ್ಮನಿಗೆ ಆಹ್ವಾನಿಸಲಾಗಿತ್ತು. ರೊಮಾ ಅವರು ಹೆಸರಾಂತ ವೈದ್ಯ ಡಾ. ಸಚಿಸ್ ರೇ ಅವರನ್ನು ವರಿಸಿದ್ದರು ಎಂದು ಅವರ ಪುತ್ರ ಆಶಿಶ್ ರೇ ತಿಳಿಸಿದ್ದಾರೆ.