HEALTH TIPS

ಮಾನವನ ಅನಿಯಂತ್ರಿತ ಹಸ್ತಕ್ಷೇಪಕ್ಕೆ ಚುರಲ್ಮಲಾ ದುರಂತ ಉದಾಹರಣೆ: ಸಚಿವೆ ಜೆ.ಚಿಂಚುರಾಣಿ .

ತಿರುವನಂತಪುರಂ: ಮಾನವ ಸಮಾಜದ ಅನಿಯಂತ್ರಿತ ಹಸ್ತಕ್ಷೇಪಗಳು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಚುರಲ್ ಮಲದಲ್ಲಿ ಆಗಿರುವ ಅನಾಹುತಗಳೇ ಇದಕ್ಕೆ ಉದಾಹರಣೆ ಎಂದು ಪಶುಸಂಗೋಪನೆ ಮತ್ತು ಮೃಗಾಲಯ ಸಚಿವೆ ಜೆ.ಚಿಂಚುರಾಣಿ ಹೇಳಿರುವರು.

ತಿರುವನಂತಪುರ ಮ್ಯೂಸಿಯಂ ಕಾಂಪೌಂಡ್‍ನಲ್ಲಿ ನಡೆದ ಸಮಾರಂಭದಲ್ಲಿ ವನ್ಯಜೀವಿ ಸಪ್ತಾಹ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಇತರ ಆವಾಸಸ್ಥಾನಗಳನ್ನು ಅತಿಕ್ರಮಿಸಬಾರದು ಮತ್ತು ಅರಣ್ಯ ಮತ್ತು ವನ್ಯಜೀವಿಗಳು ಪ್ರಕೃತಿಯ ಭಾಗವಾಗಿದೆ ಎಂಬ ಚಿಂತನೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ 2 ರಿಂದ 8 ರವರೆಗೆ ಒಂದು ವಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮ್ಯೂಸಿಯಂ ಮತ್ತು ಮೃಗಾಲಯ ಇಲಾಖೆಯು ಸಹಬಾಳ್ವೆಯಿಂದ ವನ್ಯಜೀವಿ ಸಂರಕ್ಷಣೆಯ ಪರಿಕಲ್ಪನೆಯನ್ನು ಉತ್ತೇಜಿಸಲು ಒಂದು ವಾರದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಮೃಗಾಲಯವು ಪ್ರವಾಸಿ ತಾಣವಾಗಿರುವುದಕ್ಕಿಂತ ಹೆಚ್ಚಾಗಿ ಪ್ರಾಣಿಗಳಿಗೆ ವಿಶಿಷ್ಟವಾದ ಆವಾಸಸ್ಥಾನವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತದೆ. ಪ್ರಸ್ತುತ ಜಿರಾಫೆಗಳನ್ನು ಮೃಗಾಲಯಕ್ಕೆ ತರುವ ಕಾರ್ಯಕ್ರಮಗಳಿಗೆ ಇಲಾಖೆ ಮುಂದಾಗಿದೆ. ಹನುಮಾನ್ ಮಂಗ ಹೊರಗೆ ಹಾರಿದ ನಂತರ ಅದನ್ನು ಮರಳಿ ಕರೆತರುವಲ್ಲಿ ಮೃಗಾಲಯದ ಸಿಬ್ಬಂದಿ ಅವರ ಆದರ್ಶಪ್ರಾಯ ಕಾರ್ಯವನ್ನು ಸಚಿವರು ಶ್ಲಾಘಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries