HEALTH TIPS

ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಮಾನ್ಯತೆ: ಅಭಿನಂದನೆ

ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಎನ್.ಕ್ಯು.ಎ.ಎಸ್. ಅನುಮೋದಿತ ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರವನ್ನು ಗೌರವಿಸಿ ಅಭಿನಂದಿಸಲಾಯಿತು. ಅಗಲ್ಪಾಡಿ ಶಾಲಾ ಮೈದಾನದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಅಭಿನಂದನಾ ಮೆರವಣಿಗೆ ನಡೆಯಿತು. ಶಾಸಕ ಎನ್.ಎ.ನೆಲ್ಲಿಕುನ್ನು, ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸೋಳಿಗೆ, ಜನಪ್ರತಿನಿಧಿಗಳು, ಜಿಲ್ಲಾ ಪಂಚಾಯತಿ ಸದಸ್ಯರು, ಬ್ಲಾಕ್ ಪಂಚಾಯತಿ ಸದಸ್ಯರು, ಕುಟುಂಬಶ್ರೀ ಸದಸ್ಯರು, ಐಸಿಡಿಎಸ್ ಸದಸ್ಯರು, ಹಸಿರು ಕ್ರಿಯಾಸೇನೆ ಸದಸ್ಯರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಸಿಡಿಎಸ್ ಅಧ್ಯಕ್ಷರು, ಎಡಿಎಸ್ ಸದಸ್ಯರು, ವ್ಯಾಪಾರಿ ಪ್ರಮುಖರು, ಶಿಕ್ಷಕರು, ಸ್ಥಳೀಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಅಭಿನಂದನಾ ಸಮಾರಂಭವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಕುಟುಂಬ ಆರೋಗ್ಯ ಕೇಂದ್ರಕ್ಕೆ ಪ್ರೀತಿಯ ಉಡುಗೊರೆ ನೀಡಲಾಯಿತು. ವೈದ್ಯಾಧಿಕಾರಿ ಡಾ.ಸೈಯದ್ ಶುಹೈಬ್ ಅವರನ್ನು ಸನ್ಮಾನಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಪೊಸೊಳಿಗೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎಲಿಸಬೆತ್ ಕ್ರಾಸ್ತಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಖದೀಜಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಜೀವ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಬ್ಲಾಕ್ ಪಂಚಾಯಿತಿ ಸದಸ್ಯೆ ನಳಿನಿ, ಯಶೋಧಾ, ವಾರ್ಡ್ ಸದಸ್ಯ ಹರೀಶ್ ಗೋಸಾಡ, ವೈದ್ಯಾಧಿಕಾರಿ ಡಾ.ಸೈಯದ್. ಶುಹೈಬ್ ತಂಙಳ್, ರಾಜಕೀಯ ಪಕ್ಷದ ಪ್ರತಿನಿಧಿ ಬಿ.ಟಿ.ಅಬ್ದುಲ್ಲ ಕುಂಞÂ್ಞ, ಮುಖಂಡರಾದ ನಾರಾಯಣನ್ ನಂಬಿಯಾರ್ ಮಾತನಾಡಿದರು. ಜೆಎಚ್‍ಐ ರಾಜೇಶ್ ಕೆ ನಂಬಿಯಾರ್ ಸ್ವಾಗತಿಸಿ, ಪಂಚಾಯತಿ ತಾಂತ್ರಿಕ ಸಹಾಯಕ ನವಾಜ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries