ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಮಾಲಿನ್ಯ ಮುಕ್ತ ನವಕೇರಳ ಜನಕೀಯ ಅಭಿಯಾನದೊಂದಿಗೆ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಪಂಚಾಯಖಿI ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.
ಗ್ರಾ.ಪಂ.ಉಪಾಧ್ಯಕ್ಷ ರಮ್ಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ ಕುಲಾಲ್, ಪಂ.ಸದಸ್ಯರಾದ ಉಷಾ ಕುಮಾರಿ, ಮಹೇಶ್ ಭಟ್, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಸಹಾಯಕ ಕಾರ್ಯದರ್ಶಿ ಗಿರೀಶ್ ಸಿ, ವಿಇಒ ಡೇವಿ, ನವಾಸ್ ಮತ್ರ್ಯ, ಆಫೀದ್ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ನಿಷೇಧದ ಪ್ರಚಾರರಾರ್ಥ ಬಟ್ಟೆಚೀಲ ಮತ್ತು ಬುತ್ತಿ ಪಾತ್ರೆ ವಿತರಣೆಯನ್ನು ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯರಿಗೆ ನೀಡುವ ಮೂಲಕ ಬೃಹತ್ ಪದ್ಧತಿಗೆ ಚಾಲನೆ ನೀಡಲಾಯಿತು.
ಮಾಲಿನ್ಯ ನಿರ್ವಹಣಾ ಸಲಕರಣೆಗಳ ಕಿಟ್ ನೀಡಲಾಯಿತು. ಗಾಂಧಿ ಜಯಂತಿಯ ಅಂಗವಾಗಿ ಅಕ್ಟೋಬರ್ 2 ರಿಂದ ಪಂಚಾಯತಿನ ವಿವಿಧೆಡೆಗಳಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಂಗವಾಗಿ ಗಾಂಧಿ ಜಯಂತಿಯಂದು ಪೆರ್ಲ ಪೇಟೆಯಲ್ಲಿ ಶುಚೀಕರಣ ನಿರ್ವಹಿಸಿದ ಪೆರ್ಲ ನಲಂದಾ ಕಾಲೇಜಿನ ಎನ್ನೆಸ್ಸಸ್ ಘಟಕಕ್ಕೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕಾಲೇಜು ಪ್ರಾಂಶುಪಾಲ ಶಂಕರ್ ಕುಲಾಲ್ ಖಂಡಿಗೆ ಉಪಸ್ಥಿತರಿದ್ದರು.