HEALTH TIPS

ನಕ್ಸಲರೊಂದಿಗೆ ನಂಟು: ಎನ್‌ಐಎ ದಾಳಿ

        ಕೋಲ್ಕತ್ತ: ಕೋಲ್ಕತ್ತವೂ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳ ಒಟ್ಟು 12 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ದಾಳಿ ನಡೆಸಿದೆ.

         ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಇಬ್ಬರು ಮಹಿಳೆಯರು ಹಾಗೂ ಅವರ ಸಹಚರರಿಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.

         'ಈ ಇಬ್ಬರು ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ ಸಂಶೋಧಕರೊಬ್ಬರ ಮನೆಯ ಮೇಲೆಯೂ ದಾಳಿ ನಡೆದಿದೆ. ಈ ಎಲ್ಲರೂ ಸೇರಿ ಹಣ ಸಂಗ್ರಹಿಸಿ ಛತ್ತೀಸಗಢ, ಜಾರ್ಖಂಡ್‌ ಹಾಗೂ ಬಿಹಾರದಲ್ಲಿರುವ ನಕ್ಸಲರಿಗೆ ಕಳುಹಿಸುತ್ತಿದ್ದರು. ಗಣಿಗಾರಿಕೆಯಲ್ಲಿನ ಕಾರ್ಮಿಕರ ಹಕ್ಕುಗಳಿಗಾಗಿ ಸಹಕಾರ ನೀಡುತ್ತಿದ್ದ ಎನ್‌ಜಿಒನಲ್ಲಿ ಈ ಮಹಿಳೆಯರು ಕೆಲಸ ಮಾಡುತ್ತಿದ್ದರು. ದಾಳಿಯ ವೇಳೆ ಹಲವು ದಾಖಲೆಗಳು ಲಭ್ಯವಾಗಿವೆ' ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದರು.

           'ಪೂರ್ವ ಭಾರತದುದ್ದಕ್ಕೂ ನಕ್ಸಲ್‌ ಚಟುವಟಿಕೆಯನ್ನು ವಿಸ್ತರಿಸುವ ಈ ಜಾಲವನ್ನು ತಿಳಿದುಕೊಳ್ಳುವ ಸಲುವಾಗಿ ದಾಳಿ ನಡೆಸಲಾಗಿದೆ' ಎಂದರು. ಎನ್‌ಐಎ ಅಧಿಕಾರಿಗಳು ಹಾಗೂ ಪಶ್ಚಿಮ ಬಂಗಾಳದ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಜೊತೆಕೂಡಿ ಈ ದಾಳಿ ನಡೆಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries