ಬಾಯಿಯಲ್ಲಿ ಹುಣ್ಣಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ತುಂಬಾ ತೊಂದರೆ ಕೊಡುತ್ತದೆ. ಇದರಿಂದಾಗಿ ಏನಾದರೂ ತಿನ್ನಲು ಮತ್ತು ಕುಡಿಯಲು ಬಹಳ ಕಷ್ಟವಾಗುತ್ತದೆ. ಆದರೆ ಆಲಂ ಕಲ್ಲಿನಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಿಮಗೆ ತಿಳಿದಿದೆಯೇ?
ಆಲಂ ಕಲ್ಲು ಹಲವು ರೂಪಗಳಲ್ಲಿ ಬಳಸಬಹುದು. ಬೇರೆ ಬೇರೆ ಸಮಸ್ಯೆಗೆ ಆಲಂ ಅನ್ನು ಬಳಸುವ ವಿಧಾನ ವಿಭಿನ್ನವಾಗಿರುತ್ತದೆ. ಆಲಂ ಕಲ್ಲು ಇದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ನೋಡಲು ಬೆಳ್ಳಗೆ ಹರಳಿನಂತೆ ಇರುವ ಪದಾರ್ಥವಾಗಿದೆ. ಇದನ್ನು ಅಲ್ಯುಮಿನಿಯಂ ಹಾಗೂ ಪೊಟ್ಯಾಷಿಯಂ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸುತ್ತಾರೆ. ಇದನ್ನು ಫಿಟ್ಕಾರಿ ಎಂದು ಕೂಡ ಹೇಳಲಾಗುತ್ತದೆ. ನೋಡಲು ಕಲ್ಲು ಉಪ್ಪಿನಂತೆ ಕಾಣುವ ಈ ವಸ್ತು ನಿಮ್ಮ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ.
ಯಾವ ಸಮಸ್ಯೆಗೆ ಹೇಗೆ ಫಿಟ್ಕಾರಿಯನ್ನು ಬಳಸಬಹುದು
- ವಸಡು ದೌರ್ಬಲ್ಯ, ಒಸಡುಗಳಲ್ಲಿ ಕೀವು ತುಂಬುವುದು, ಒಸಡುಗಳಲ್ಲಿ ರಕ್ತಸ್ರಾವ ಇತ್ಯಾದಿಗೆ ಇದು ಪ್ರಯೋಜನಕಾರಿಯಾಗಿದೆ. ಆಲಂ ಅನ್ನು ಪುಡಿ ಮಾಡಿ ಬಾಣಲೆಯ ಮೇಲೆ ಚೆನ್ನಾಗಿ ಉರಿಯಿರಿ. ಹಲ್ಲುಜ್ಜಿದ ನಂತರ ಈ ಪುಡಿಯನ್ನು ನಿಮ್ಮ ಬೆರಳಿಗೆ ತೆಗೆದುಕೊಂಡು ವಸಡುಗಳ ಮೇಲೆ ಉಜ್ಜಿಕೊಳ್ಳಿ. ಎರಡು ದಿನಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.
- ರಿಂಗ್ ವರ್ಮ್, ತುರಿಕೆ, ಕುರುಗಳು ಈ ರೀತಿಯ ಚರ್ಮದ ಸಮಸ್ಯೆಗಳು ಉಂಟಾದಲ್ಲಿ ಸ್ನಾನ ಮಾಡುವಾಗ ದೇಹಕ್ಕೆ ಆಲಂ ಕಲ್ಲಿನಿಂದ ಉಜ್ಜಿಕೊಳ್ಳಿ. ಇದು ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಅಲ್ಲದೆ ಬೆವರಿನ ವಾಸನೆಯೂ ನಿಲ್ಲುತ್ತದೆ. ಸುಕ್ಕುಗಳನ್ನು ತಡೆಯುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ.
- ಬಾಯಿಯ ಹುಣ್ಣು ಹಲವಾರು ದಿನಗಳವರೆಗೆ ನಿಮ್ಮನ್ನು ಕಾಡುತ್ತಿದ್ದರೆ. ಈ ಸಿಂಪಲ್ ಟಿಪ್ಸ್ ಅನ್ನು ಬಳಸಿ. ಆಲಂ ಪುಡಿಯನ್ನು ನೀರಿನಲ್ಲಿ ಕರಗಿಸಿ ಅದರಿಂದ ಬಾಯಿಯನ್ನು ಮುಕ್ಕಳಿಸಿ. ನೀವು ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಪರಿಹಾರವನ್ನು ಪಡೆಯುತ್ತೀರಿ.