HEALTH TIPS

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ವಿಜಯ ಕಿಶೋರ್ ಅಧ್ಯಕ್ಷೆ: ಕೇಂದ್ರದಿಂದ ನಾಮನಿರ್ದೇಶನ

 ವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷರನ್ನಾಗಿ ವಿಜಯಾ ಕಿಶೋರ್‌ ರಹತ್ಕರ್‌ ಅವರನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ.

ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದು, 'ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ - 1990ರ ಸೆಕ್ಷನ್‌ 3ರ ಅಡಿಯಲ್ಲಿ ವಿಜಯಾ ಅವರನ್ನು ನೇಮಿಸಲಾಗಿದ್ದು, ಅಧಿಕಾರಾವಧಿ ಮೂರು ವರ್ಷ ಅಥವಾ ಅವರಿಗೆ 65 ವರ್ಷ ಆಗುವವರೆಗೆ ಇರಲಿದೆ' ಎಂದು ತಿಳಿಸಿದೆ.


ವಿಜಯಾ ಅವರ ಅಧಿಕಾರಾವಧಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ನೇಮಕದ ಆದೇಶವು ಭಾರತ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾಗಲಿದೆ ಎಂದಿದೆ.

ವಿಜಯಾ ಅವರನ್ನಷ್ಟೇ ಅಲ್ಲದೆ, ಎನ್‌ಸಿಡಬ್ಲ್ಯುನ ನೂತನ ಸದಸ್ಯರನ್ನಾಗಿ ಡಾ. ಅರ್ಚನಾ ಮಜುಂದಾರ್‌ ಅವರನ್ನು ಮೂರು ವರ್ಷದ ಅವಧಿಗೆ ನೇಮಿಸಿರುವುದಾಗಿಯೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

https://m.dailyhunt.in/news/india/kannada/prajavani-epaper-praj/shivamogga-updates-shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries