HEALTH TIPS

ರಬ್ಬರ್ ಆಮದು ಮಾಡಿಕೊಳ್ಳಲು ಎನ್.ಒ.ಸಿ. ಮೇಲೆ ಶುಲ್ಕ ವಿಧಿಸಲಿರುವ ರಬ್ಬರ್ ಬೋರ್ಡ್

ಕೊಟ್ಟಾಯಂ: ರಬ್ಬರ್ ಆಮದು ಮಾಡಿಕೊಳ್ಳಲು ಅಗತ್ಯವಿರುವ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ ಒಸಿ) ನೀಡಲು ರಬ್ಬರ್ ಬೋರ್ಡ್ ಶುಲ್ಕ ವಿಧಿಸಲಿದೆ.

ಮಂಡಳಿಯ ಶಿಫಾರಸು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ. ಆಮದು ಸುಂಕದ ಪ್ರತಿ ಬ್ಯಾಚ್‍ಗೆ 5000 ರೂ.ಗಳನ್ನು ವಿಧಿಸುವುದು ಮಂಡಳಿಯ ಪ್ರಸ್ತಾಪವಾಗಿದೆ.

ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಡಿಮೆ ಗುಣಮಟ್ಟದ ನೈಸರ್ಗಿಕ ರಬ್ಬರ್‍ನ ವಿವಿಧ ತಳಿಗಳ ಆಮದನ್ನು ನಿಯಂತ್ರಿಸಲು ಎನ್‍ಒಸಿ ಪರಿಚಯಿಸಲಾಗಿದೆ. ಪ್ರಮಾಣಪತ್ರಗಳಿಗೆ ಶುಲ್ಕ ವಿಧಿಸುವುದು ಸೇರಿದಂತೆ ಹೊಸ ಕಾರ್ಯವಿಧಾನಗಳ ಪರಿಚಯದೊಂದಿಗೆ, ಆಮದು ಮಾಡಿಕೊಳ್ಳುವ ರಬ್ಬರ್‍ನ ಗುಣಮಟ್ಟ ನಿಯಂತ್ರಣವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇದು ದೇಶೀಯ ಮಾರುಕಟ್ಟೆ ಸುಧಾರಣೆಗೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

2021 ರಲ್ಲಿ, ಕೇಂದ್ರ ಸರ್ಕಾರವು ರಬ್ಬರ್ ಆಮದಿನ ಮೇಲಿನ ಪರಿಮಾಣಾತ್ಮಕ ನಿರ್ಬಂಧಗಳನ್ನು ಹಿಂತೆಗೆದುಕೊಂಡಿತ್ತು. ಬದಲಿಗೆ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಪ್ರಕಾರ ಆಮದು ಮಾಡಿಕೊಂಡ ರಬ್ಬರ್‍ನ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಪರೀಕ್ಷಿಸಿದ ನಂತರ ಎನ್‍ಒಸಿ ನೀಡಲು ನಿರ್ಧರಿಸಲಾಯಿತು. ಅಂತಹ ಎನ್.ಒ.ಸಿಗಳಿಗೆ ಶುಲ್ಕ ವಿಧಿಸಲು ಈಗ ಶಿಫಾರಸು ಮಾಡಲಾಗಿದೆ.

ದೇಶದ ಇತರ ಹಲವು ಸಂಸ್ಥೆಗಳು ರಬ್ಬರ್ ಅಲ್ಲದ ವಸ್ತುಗಳ ಆಮದುಗಾಗಿ ಶುಲ್ಕವನ್ನು ವಿಧಿಸುವ ಮೂಲಕ ಪ್ರಮಾಣಪತ್ರಗಳನ್ನು ನೀಡುತ್ತವೆ. 2023-24 ರಲ್ಲಿ, ದೇಶವು 492682 ಒಖಿ ರಬ್ಬರ್ ಅನ್ನು ಆಮದು ಮಾಡಿಕೊಂಡಿದೆ. ಈ ಆರ್ಥಿಕ ವರ್ಷದಲ್ಲಿ ಸೆಪ್ಟೆಂಬರ್ ವರೆಗೆ 310413 ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 254488 ಮೆ.ಟನ್ ಆಮದು ಆಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries