ಅಮೆರಿಕಾ: ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಡಿಯೋಗಳು ( Wedding Photo ) ವೈರಲ್ ಆಗುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಮದುವೆಯ ಹಲವು ವಿಡಿಯೋಗಳು ನೆಟ್ಟಿಗರನ್ನು ಆಕರ್ಷಿಸುತ್ತಿವೆ. ಇದೇ ವರ್ಗಕ್ಕೆ ಸೇರಿದ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಮಧುರ ಕ್ಷಣ. ಆ ಮದುವೆಯ ಕ್ಷಣಗಳಿಗಾಗಿ ವಧು-ವರರು ಬಹಳಷ್ಟು ಕನಸು ಕಾಣುತ್ತಾರೆ. ಮದುವೆಯ ಕ್ಷಣಗಳನ್ನು ದೀರ್ಘಕಾಲ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಆಚರಿಸಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ. ವೈರಲ್ ಪೋಸ್ಟ್‌ನಲ್ಲಿ, ವರ ತನ್ನ ಮದುವೆಯಲ್ಲೂ ( Wedding ) ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾನೆ. ಮದುವೆ ಸಮಾರಂಭದಲ್ಲಿ ತುಂಬಾ ಖುಷಿಯಾಗಿ ಇರಬೇಕಾದ ವರ ಕೆಲಸ ಮಾಡುತ್ತಿದ್ದಾನೆ. ಈ ಘಟನೆ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ.
ಇದು ಸ್ವತಃ AI ಸ್ಟಾರ್ಟ್‌ಅಪ್ 'ದಟ್ಲಿ' ಸಹ-ಸಂಸ್ಥಾಪಕರಾದ ಕೇಸಿ ಮ್ಯಾಕ್ರೆಲ್ ಅವರ ಮದುವೆಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ತೆಗೆದ ಫೋಟೋ.. ಈಗ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇವರು ಮಾಡಿದ ಈ ಕೆಲಸಕ್ಕೆ ನೆಟ್ಟಿಗರು ಸಖತ್ತಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಫೋಟೋವನ್ನು ಅವರ ಸಹ-ಸಂಸ್ಥಾಪಕ ಟೊರೆ ಲಿಯೊನಾರ್ಡ್ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲಸದ ಚಟಕ್ಕೆ ಬಿದ್ದಿದ್ದ ಮ್ಯಾಕೆರೆಲ್ ತನ್ನ ಮದುವೆಯ ದಿನವೂ ನಿಲ್ಲಲಿಲ್ಲ ಎಂಬ ಶೀರ್ಷಿಕೆಯನ್ನು ಲಿಯೊನಾರ್ಡ್ ಬರೆದಿದ್ದಾರೆ.